ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳ ಅಂತ್ಯಕ್ಕೆ ಮಾನವ ರಹಿತ ಚಂದ್ರಯಾನ

By Staff
|
Google Oneindia Kannada News

Chandrayaan-1 set for Oct 22 take-offಬೆಂಗಳೂರು, ಅ.7: ಮೊಟ್ಟಮೊದಲ ಬಾರಿಗೆ ದೇಶಿಯ ತಂತ್ರಜ್ಞಾನದ ಚಂದ್ರಯಾನ ನೌಕೆಯ ಉಡಾವಣೆಯ ಮಹೂರ್ತ ಸಿದ್ಧವಾಗಿದೆ.ಅಕ್ಟೋಬರ್ 22ರಂದು ಚಂದ್ರಯಾನದ ನೌಕೆ ಗಗನವನ್ನು ಚುಂಬಿಸಲಿದೆ ಹವಾಮಾನ ವೈಪರೀತ್ಯ ಉಂಟಾದರೆ ಅ.26 ರಂದು ಉಡಾವಣೆಯಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಶ್ರೀಹರಿಕೋಟಾದ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಅಂದು ಬೆಳಿಗ್ಗೆ 6.20ಕ್ಕೆ ಚಂದ್ರಯಾನ ನೌಕೆ ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕಳೆದ ವಾರ ಚಂದ್ರಯಾನ ನೌಕೆಯನ್ನು ಶ್ರೀಹರಿಕೋಟಾಕ್ಕೆ ಕಳುಹಿಸಲಾಗಿತ್ತು.

ಚಂದ್ರಯಾನ -1:
ಸುಮಾರು 1,380 ಕೆಜಿ ತೂಕುವ ಬಾಹ್ಯಾಕಾಶ ನೌಕೆಯ ವಿನ್ಯಾಸ ನಗರದ ಇಸ್ರೋ ಕೇಂದ್ರದಲ್ಲಿ ಮಾಡಲಾಗಿದೆ. ಉಡಾವಣಾ ವಾಹನ ಪಿಎಸ್ ಎಲ್ ವಿ-ಸಿ11 ರಂದು ಬಳಸಿ ಉಪಗ್ರಹದ ಉಡಾವಣೆ ನಡೆಯಲಿದೆ. 50 ಗಂಟೆಗಳಿಗೂ ಮೊದಲು, ಅಂದರೆ ಅ. 20 ರಿಂದಲೇ ಉಡಾವಣೆಯ ಕ್ಷಣಗಣನೆ ಆರಂಭವಾಗುತ್ತದೆ ಎಂದು ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಸತೀಶ್ ತಿಳಿಸಿದರು. ಭಾರತದ ಐದು, ಯುಎಸ್ ನ ಆರು ಹಾಗೂ ಬಲ್ಗೇರಿಯಾದ 11 ಪೇ ಲೋಡ್ ಗಳನ್ನು ಈ ಉಪಗ್ರಹ ಹೊತ್ತೊಯ್ಯಲಿದೆ. ಚಂದ್ರನ ಸುತ್ತ 100 ಕಿ.ಮೀ ಅಕ್ಷಾಂಶದಲ್ಲಿ ಈ ಉಪಗ್ರಹ ಸುತ್ತಲಿದೆ.ಚಂದ್ರನಲ್ಲಿ ನೀರು ಮತ್ತು ಖನಿಜ ನಿಕ್ಷೇಪಗಳ ಬಗ್ಗೆ ವಿಶೇಷವಾಗಿ ಈ ನೌಕೆ ಅಧ್ಯಯನ ನಡೆಸಿ ಮಾಹಿತಿ ನೀಡಲಿದೆ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X