ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಟಿಎಚ್ ಮಾರುಕಟ್ಟೆಗೆ ಅಡಿಯಿಟ್ಟ ಏರ್ ಟೆಲ್

By Staff
|
Google Oneindia Kannada News

kareena to promote airtel dth serviceನವದೆಹಲಿ, ಅ.7: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಭಾರತಿ ಏರ್ ಟೆಲ್ ಇಂದು ಅಧಿಕೃತವಾಗಿ ಡಿಟಿಎಚ್ ಕ್ಷೇತ್ರಕ್ಕೆ ಅಡಿಯಿಟ್ಟಿತು. 'ಏರ್ ಟೆಲ್ ಡಿಜಿಟಲ್' ಡಿಟಿಎಚ್ ಸೇವೆ ಗುರುವಾರದಿಂದ(ಅ.9) ದೇಶದಾದ್ಯಂತ ಲಭ್ಯವಾಗಲಿದೆ.

''ಭಾರತದ ಡಿಟಿಎಚ್ ಉದ್ಯಮ ಈಗೀಗಷ್ಟೆ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಅದರ ಸಾಮರ್ಥ್ಯ ನಾಲ್ಕುಪಟ್ಟು ಹೆಚ್ಚಲಿದೆ. ದೇಶದಲ್ಲಿ ಪ್ರಸ್ತುತ 225 ದಶಲಕ್ಷ ಗ್ರಾಹಕರು ಡಿಟಿಎಚ್ ಸೇವೆ ಪಡೆಯುತ್ತಿದ್ದಾರೆ. ನಾವು ಡಿಟಿಎಚ್ ಮಾರುಕಟ್ಟೆಗೆ ಅಡಿ ಇಡಲು ಇದಕ್ಕಿಂತಲೂ ಸೂಕ್ತ ಸಮಯ ಮತ್ತೊಂದಿಲ್ಲ ಎಂದು ಭಾವಿಸಿದ್ದೇವೆ '' ಎಂದು ಭಾರತಿ ಏರ್ ಟೆಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕೋಹ್ಲಿ ತಿಳಿಸಿದರು.

ಪ್ರಸ್ತುತ ಏರ್ ಟೆಲ್ ಡಿಜಿಟಲ್ ನಲ್ಲಿ 175 ಚಾನೆಲ್ ಗಳು ಲಭ್ಯವಿದ್ದು 62 ನಗರಗಳ 21,000 ಚಿಲ್ಲರೆ ವ್ಯಾಪಾರಿಗಳ ಮೂಲಕ ಗ್ರಾಹಕರು ಡಿಟಿಎಚ್ ಸೇವೆ ಪಡೆಯಬಹುದು. ಮುಂದಿನ ದಿನಗಳಲ್ಲಿ ಈ ಸೇವೆ 252 ನಗರಗಳಿಗೆ ವಿಸ್ತರಿಸಲಿರುವುದಾಗಿ ಕೋಹ್ಲಿ ತಿಳಿಸಿದರು. ದಕ್ಷಿಣ ಭಾರತದಲ್ಲಿ 1,999 ರು.ಗಳಿಗೆ ಹಾಗೂ ಭಾರತದ ಉಳಿದ ಭಾಗಗಳಲ್ಲಿ 2,499 ರು.ಗಳಿಗೆ ಏರ್ ಟೆಲ್ ಡಿಟಿಎಚ್ ಸೇವೆ ಲಭ್ಯವಾಗಲಿದೆ. ಎಂಪಿಇಜಿ4 ತಂತ್ರಜ್ಞಾನದ ಮೂಲಕ ಉತ್ತಮ ಗುಣಮಟ್ಟದ ಧ್ವನಿ ಮತ್ತು ಚಿತ್ರಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.

ಏರ್ ಟೆಲ್ ಡಿಜಿಟಲ್ ನ ಪ್ರಚಾರ ತಂತ್ರಕ್ಕಾಗಿ ಬಾಲಿವುಡ್ ಹಾಗೂ ಕ್ರೀಡಾ ಕ್ಷೇತ್ರದ 9 ಮಂದಿ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಮುಖ್ಯವಾಗಿ ನಟಿ ಕರೀನಾ ಕಪೂರ್, ಸೈಫ್ ಆಲಿಖಾನ್ ಹಾಗೂ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕಂಪನಿಯ ರಾಯಭಾರಿಗಳಾಗಿ ಕಾಣಿಸಲಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ಭಾರಿ ದರಸಮರಕ್ಕೆ ಕಾರಣವಾದ ಏರ್ ಟೆಲ್ ಈಗ ಡಿಟಿಎಚ್ ಕ್ಷೇತ್ರದಲ್ಲೂ ಹೊಸ ದರಸಮರಕ್ಕೆ ನಾಂದಿ ಹಾಡಲಿದೆಯೇ?

(ದಟ್ಸ್ ಕನ್ನಡ ಐಟಿ ಬಿಟಿ)

ಬಿಗ್ ಟಿವಿಯಿಂದ ಕನ್ನಡ ಚಾನೆಲ್ಗಳ ಸುರಿಮಳೆ
ಬಿಗ್ ಟಿವಿಯಿಂದ ಕನ್ನಡ ಸಿನಿಮಾ ಚಾನೆಲ್ ಪ್ರಾರಂಭ
ಜೀ ಡಿಶ್ ಟಿವಿಯಿಂದ ಉಚಿತ ಸೆಟ್ ಅಪ್ ಬಾಕ್ಸ್
ನೇರವಾಗಿ ಕೈಸುಟ್ಟುಕೊಂಡ ಡಿಟಿಎಚ್ ಕಂಪನಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X