ಮೈಲಾರಪ್ಪ ಮರುನೇಮಕಾತಿಗೆ ಕೋರ್ಟ್ ಅಸ್ತು
ಬೆಂಗಳೂರು, ಅ.5: ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್ ಮೈಲಾರಪ್ಪ ಅವರನ್ನು ಇನ್ನೆರಡು ತಿಂಗಳಲ್ಲಿ ಮರು ನೇಮಕಾತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ತರುಣ್ ಚಟರ್ಜಿ ಮತ್ತು ಹರ್ಜಿತ್ ಸಿಂಗ್ ಬೇಡಿ ಒಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಈ ಮೂಲಕ ಮೈಲಾರಪ್ಪ ಅವರ ನೇಮಕಾತಿಯನ್ನು ತಡೆ ಹಿಡಿದು ಕರ್ನಾಟಕ ಹೈ ಕೋರ್ಟ್ ನೀಡಿದ್ದ ಅದೇಶವನ್ನು ತಳ್ಳಿಹಾಕಲಾಗಿದೆ. ಅರ್ಜಿದಾರರ ನೇಮಕಾತಿ ನ್ಯಾಯಯುತವಾಗಿದೆ ಎಂದು ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ಹೇಳಲಾಗಿದೆ.
ಜುಲೈ 2007 ರಲ್ಲಿ ನೇಮಕಾತಿಗೆ ಬೇಕಾದ ಅರ್ಹತೆ ಹೊಂದಿಲ್ಲದ ಕಾರಣ ಮೈಲಾರಪ್ಪ ಅವರಿಗೆ ಪ್ರವೇಶವನ್ನು ನಿರಾಕರಿಸಿ, ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿತ್ತು. 10 ವರ್ಷಗಳ ಸ್ನಾತಕೋತ್ತರ ಪದವಿ ಅಥವಾ ಸಮಾನಾಂತರ ತರಗತಿಗಳಿಗೆ ಬೋಧನೆ ಮಾಡಿದ ಅನುಭವ ಇರುವುದು ಅವಶ್ಯವಾಗಿತ್ತು. ಸಂಶೋಧನಾ ಸಹಾಯಕರಾಗಿ ದುಡಿದ ಅನುಭವವನ್ನು ಹೈಕೋರ್ಟ್ ಪರಿಗಣಿಸದೆ , ಮೈಲಾರಪ್ಪ ಅವರ ವಿರುದ್ಧ ಆದೇಶ ಹೊರಡಿಸಿತ್ತು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications