ಯಡಿಯೂರಪ್ಪ ಗೋಡ್ಸೆ ಮನೆಯಲ್ಲಿ ಹುಟ್ಟಿರಬೇಕು : ಖರ್ಗೆ
ಬೆಂಗಳೂರು, ಅ. 5 : ನೀವಾಡುತ್ತಿರುವ ಮಾತು ಗಮನಿಸಿದರೆ, ನೀವು ಗೋಡ್ಸೆ ಮನೆಯಲ್ಲಿ ಹುಟ್ಟಿರಬೇಕು ಎನಿಸುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ತೀವ್ರ ವಾಗ್ಧಾಳಿ ನಡೆಸಿದರು. ಪ್ರತಿಪಕ್ಷದವರನ್ನು ಕಾಡುಪ್ರಾಣಿಗಳಿಗೆ ಹೋಲಿಸಿದ್ದಾರೆ ಎಂಬುದರ ಹಿನ್ನೆಲೆಯಲ್ಲಿ ಖರ್ಗೆ ಈ ಕಟು ಮಾತುಗಳನ್ನು ಆಡಿದ್ದಾರೆ.
ಶನಿವಾರ ನಗರದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಏರ್ಪಡಿಸಲಾಗಿದ್ದ ಬೃಹತ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆಯುವೆ ಎಂದು ಬಸವಣ್ಣನವರ ವಚನ ಹೇಳುತ್ತಿದ್ದ ಯಡಿಯೂರಪ್ಪ ಅವರು ನುಡಿದ ಮಾತುಗಳು ಏನಾಗಿವೆ ಎಂದು ಪ್ರಶ್ನಿಸಿದರು. 2 ರು.ಗೆ ಅಕ್ಕಿಗೆ ನೀಡುತ್ತೇವೆ ಎಂದು ಜನತೆಗೆ ಸುಳ್ಳು ಹೇಳಿದ್ದಾರೆ. ತಾಕತ್ತು ಇದ್ದರೆ 2 ರು.ಗೆ ಕೆಜಿ ಅಕ್ಕಿ ವಿತರಿಸಿ ಎಂದು ಸವಾಲು ಹಾಕಿದರು.
ಯುವಕರಿಗೆ ಮಾಸಿಕ ಒಂದೂವರೆ ಸಾವಿರ ರು. ಸ್ಟೈಪೆಂಡ್ ಕೊಡುತ್ತೇವೆ ಎಂದು ಕೊಚ್ಚಿಕೊಂಡಿದ್ದರು. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದನ್ನು ಬಿಟ್ಟು ಸರ್ಕಾರಿ ನೌಕರರ ನಿವೃತ್ತ ವಯೋಮಿತಿ ಹೆಚ್ಚಿಸಿ, ಲಕ್ಷಾಂತರ ಯುವಜನರ ಉದ್ಯೋಗಕ್ಕೆ ಕಲ್ಲು ಹಾಕಿದ್ದಾರೆ. ರೈತರಿಗೆ ಉಚಿತ ವಿದ್ಯುತ್ ಬರೀ ಕನಸಾಗಿದೆ. ಅಲ್ಲದೇ ಅನಿಯಮಿತ ಲೋಡ್ ಶೆಡ್ಡಿಂಗ್ ನಗರ ಪ್ರದೇಶದ ಜನರನ್ನು ನಿದ್ದೆಗೆಡಿಸಿದೆ ಎಂದು ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)
'ಯಡಿಯೂರಪ್ಪ ಅಧಿಕಾರದಲ್ಲಿರಲು ಯೋಗ್ಯರಲ್ಲ'
ಪಕ್ಷದಲ್ಲಿನ ಗುಂಪುಗಾರಿಕೆಗೆ ಸೋಲಿಗೆ ಕಾರಣ : ಖರ್ಗೆ
ಬಿಜೆಪಿ ವಿರುದ್ಧ ಕಾಂಗ್ರೆಸ್ ನ ಕಾಲ್ನಡಿಗೆ ಜಾಥಾ












Click it and Unblock the Notifications