ಎಚ್ ಡಿಕೆ ವಿರುದ್ಧ ವೀರಶೈವರು ಪ್ರತಿಭಟನೆ ನಿರ್ಧಾರ
ಬೆಂಗಳೂರು, ಅ.4: ಸಿದ್ಧಗಂಗಾ ಶ್ರೀಗಳ ಕುರಿತು ಹಾಗೂ ಹಿಂದು ಮಠಾಧೀಶರು ಸ್ವಜಾತಿ ಪ್ರೇಮ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕರ್ನಾಟಕ ವೀರಶೈವ ಸಂಘಟನೆ ಪ್ರತಿಭಟೆನೆ ನಡೆಸಲು ಮುಂದಾಗಿದೆ.
ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯದ ಹರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ, ಹೆಂಡದಂಗಡಿಗಳಲ್ಲಿ ಕುಳಿತು ಮಾತನಾಡುವಂತೆ ಹೇಳುತ್ತಿದ್ದಾರೆ ಎಂದು ಸಂಘಟನೆ ಚೇಡಿಸಿದೆ. ವಚನಭ್ರಷ್ಟ ಎಂಬ ಹಣೆಪಟ್ಟಿ ಹೊತ್ತ ನಿಮ್ಮೊಂದಿಗೆ ಸಿದ್ಧಗಂಗಾ ಶ್ರೀಗಳು ದಸರಾ ಉತ್ಸವವನ್ನು ಉದ್ಘಾಟಿಸಬೇಕಿತ್ತೆ? ಎಂಬ ಪ್ರಶ್ನೆಯನ್ನು ಒಡ್ಡ್ಡಿದ್ದಾರೆ.
ಜಾತಿಯ ಹೆಸರಿನಲ್ಲಿ ಪಕ್ಷಗಳು ಹಾಗೂ ಶಾಸಕರನ್ನು ಒಡೆದಿರುವ ನೀವು ಈಗ ಮಠಗಳನ್ನು ಒಡೆಯಲು ಹೊರಟಿದ್ದೀರಿ. ನಿಮ್ಮ ಈ ಧೋರಣೆ ವಿರುದ್ಧ ಕರ್ನಾಟಕ ಜನತೆ ಎಚ್ಚೆತ್ತುಕೊಳ್ಳುವಂತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications