ಮಠಾಧೀಶರಿಂದ ಬಲವಂತ ಮತಾಂತರಕ್ಕೆ ಖಂಡನೆ
ಬೆಂಗಳೂರು, ಅ.4: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಹಾಗೂ ಬಲವಂತ ಮತಾಂತರವನ್ನು ಖಂಡಿಸಿ ಕರ್ನಾಟಕದ ವಿವಿಧ ಮಠಾಧೀಶರು ಶನಿವಾರ ಬೆಂಗಳೂರಿನಲ್ಲಿ ಶಾಂತಿಯುತ ಪಾದಯಾತ್ರೆ ನಡೆಸಿದರು.
ದೇಶದಲ್ಲಿ ನಡೆಯುತ್ತಿರುವ ಬಲವಂತ ಮತಾಂತರ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಸ್ವಾಮೀಜಿಗಳು ಒಕ್ಕೊರಲಿನಿಂದ ಖಂಡಿಸಿದರು. ಮತಾಂತರ ಒಂದು ದುರಂತ ಪ್ರಕ್ರಿಯೆ ಹಾಗೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡುತ್ತ್ತಿರುವುದು ಖಂಡನೀಯ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತಿಳಿಸಿದರು. ವಿವಿಧ ಮಠಾಧೀಶರು ಪಾಲ್ಗೊಂಡಿದ್ದ ಪಾದಯಾತ್ರೆಯ ನೇತೃತ್ವವನ್ನು ಪೇಜಾವರ ಶ್ರೀಗಳು ವಹಿಸಿದ್ದರು.
ಸ್ವಾಮೀಜಿಗಳ ಪಾದಯಾತ್ರೆ ರಾಜಭವನದಲ್ಲಿ ಕೊನೆಗೊಂಡಿತು. ನಂತರ ವೈದ್ಯಕೀಯ ಸಚಿವ ರಾಮಚಂದ್ರ ಗೌಡರಿಗೆ ಪೇಜಾವರ ಶ್ರೀಗಳು ಮನವಿ ಪತ್ರ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications