ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂತರಪಾಳ್ಯ ವಿದ್ಯಾರ್ಥಿಗಳ ಕನಸು ನನಸಾದ ಕ್ಷಣ!

By Staff
|
Google Oneindia Kannada News

ಬೆಂಗಳೂರು, ಅ.3:ಅದೊಂದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ.ಸರಕಾರಿ ಶಾಲೆ ಅಂದರೆ ಕೇಳಬೇಕೆ?ಅಲ್ಲಿಗೆ ಬರುವವರು ಬಡವರ ಮಕ್ಕಳು.ಇತರೆ ಮಕ್ಕಳು ಹಾಕಿಕೊಳ್ಳುವ ಶೂ,ಒಳ್ಳೆ ಬಟ್ಟೆಗಳನ್ನೇ ನೋಡಿಕೊಂಡು ತೃಪ್ತಿ ಪಡುತ್ತಿದ್ದ ಮಕ್ಕಳ ಮೊಗದಲ್ಲಿ ಈಗ ನಗೆ ಸೂಸುತ್ತಿದೆ.

ಇದಕ್ಕೆ ಕಾರಣರಾದವರು ಸುರಾನ ಸ್ನಾತಕೋತ್ತರ ಕೇಂದ್ರದ ಎಂ.ಬಿ.ಎ. ವಿದ್ಯಾರ್ಥಿಗಳು.ಹಿಂದುಳಿದ ಪ್ರದೇಶದಲ್ಲಿರುವ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರಿಗೆ ಕಷ್ಟವಿರುವಾಗ ಒಳ್ಳೆ ಬಟ್ಟೆ ,ಶೂಗಳ ಮಾತು ದೂರವೇ ಉಳಿದೀತು.ಮಕ್ಕಳಲ್ಲಿ ನೂರಾರು ಕನಸುಗಳಿರುತ್ತದೆ.ಈ ಕನಸನ್ನು ನನಸು ಮಾಡಿದ ಸುರಾನ ಕಾಲೇಜಿನ ವಿದ್ಯಾರ್ಥಿಗಳು ಅ.1ರಂದು ಇದಕ್ಕೆ ಆಯ್ದುಕೊಂಡಿದ್ದು ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಪಂತರಪಾಳ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಟುವಟಿಕೆಯತ್ತ ಜಾಗೃತಿ ಮೂಡಿಸಲು ಸುರಾನ ಕಾಲೇಜಿನಲ್ಲಿ ಆರಂಭಿಸಲಾದ "H.R.CLUB" ನ ಸಹಯೋಗದಲ್ಲಿ "India I Live For You" ಹೆಸರಿನಲ್ಲಿ ಆಯೋಜಿಸಿದ್ದ ಈ ಸಮಾರಂಭದಲ್ಲಿ 100 ಮಕ್ಕಳಿಗೆ ಶೂ ಗಳನ್ನು ಕಾಲೇಜಿನ ನಿರ್ದೆಶಕರಾದ ಡಾ.ವಿ.ಪ್ರಭುದೇವ್ ವಿತರಿಸಿದರು.ನಂತರ ಮಾತನಾಡಿದ ಅವರು ಮಕ್ಕಳಲ್ಲಿ ಜೀವನದ ಮೌಲ್ಯಗಳನ್ನು ತುಂಬಿದಾಗ ಅವರು ಸಮಾಜದ ಶಕ್ತಿಯಾಗಿ ರೂಪುಗೊಳ್ಳುತ್ತಾರೆ.ಆಗ ಸಮಾಜ ಉತ್ತಮವಾಗಿ ನಿರ್ಮಾಣವಾಗಲು ಸಾಧ್ಯ.ಮಕ್ಕಳಲ್ಲಿನೂರಾರು ಕನಸುಗಳಿರುತ್ತದೆ.ಅದರ ನನಸಿಗೆ ಶಿಕ್ಷಕರು,ಸಮಾಜ ನೆರವಾಗ ಬೇಕು.ಕೇವಲ ಸರಕಾರದ ಜವಬ್ದಾರಿ ಎಂದು ನಾವು ಕೈ ಕಟ್ಟಿಕೊಂಡು ಕುಳಿತುಕೊಳ್ಳಬಾರದು ಎಂದು ನುಡಿದರು.

ಇಲ್ಲಿನ ಮಕ್ಕಳು ತುಂಬಾ ಬುದ್ದಿವಂತರಿದ್ದು,ನಮ್ಮ ಕಾಲೇಜಿನಿಂದ ಇನ್ನೂ ನೆರವು ನೀಡಲು ಸಿದ್ಧ ಎಂದ ಅವರು ಸದ್ಯದಲ್ಲೇ ಉಳಿದ 220 ಮಕ್ಕಳಿಗೂ ಶೂ ಗಳನ್ನು ವಿತರಿಸುವುದಾಗಿ ತಿಳಿಸಿದರು. ಸುರಾನ ಕಾಲೇಜಿನ ಉಪನ್ಯಾಸಕಿ ಅಪರ್ಣಾ ರಾವ್,ಶಾಲ ಮುಖ್ಯೋಪದ್ಯಾಯ ಜನರ್ಧಾನ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುರಾನ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಸಿಹಿ ವಿತರಿಸಿ ಅವರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಸತೀಶ ಕಾರ್ಯಕ್ರಮ ನಿರ್ವಹಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕಿ ಶೃತಿ ಸ್ವಾಗತಿಸಿದರು.ನಿತಿನ್ ಹೆಗಡೆ ಮುತ್ತಿಗೆ ವಂದಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X