ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಲ್ಲಾಳ ಬಳಿ 11 ಶಂಕಿತ ವ್ಯಕ್ತಿಗಳ ಬಂಧನ

By Staff
|
Google Oneindia Kannada News

ಮಂಗಳೂರು, ಅ. 3 : ಮಂಗಳೂರು ಅಪರಾಧಿ ನಿಗ್ರಹ ದಳ, ನಕ್ಸಲ್ ನಿಗ್ರಹ ಪಡೆ ಹಾಗೂ ಮುಂಬೈ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಒಬ್ಬ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಇಬ್ಬರು ಸೇರಿ ಒಟ್ಟು 11 ಜನ ಸ್ಥಳೀಯರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು, ಅಹಮದಾಬಾದ್, ಮುಂಬೈ, ದೆಹಲಿ ಸ್ಫೋಟ ಪ್ರಕರಣದಲ್ಲಿ ರಾಜ್ಯದ ವಿಜಾಪುರ, ಮಣಿಪಾಲ, ದಾವಣಗೆರೆಯ ವ್ಯಕ್ತಿಗಳು ಭಾಗಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಅಹಮದಾಬಾದ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಇಂದು ಮತ್ತೆ ಮುಂಬೈ, ಮಂಗಳೂರು ಅಪರಾಧಿ ವಿಭಾಗದ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆ ಬೀಸಿದ ಜಾಲದಲ್ಲಿ ಉಲ್ಲಾಳದ ಸಮೀಪ ಮುಕ್ಕಚೇರಿಯ ಮನೆಯೊಂದರಲ್ಲಿ ಒಬ್ಬ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಗ್ರನಿಗೆ ಆಶ್ರಯ ನೀಡಿದ ತೊಕ್ಕೂಟ್ಟುವಿನ ಚೆಂಬಗುಡ್ಡದ ಮನೆಯೊಂದರಲ್ಲಿ ಮೊಹ್ಮದ್ ಅಲಿ ಹಾಗೂ ಜಾವೇದ್ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಇಬ್ಬರು ನೀಡಿದ ಸುಳಿವಿನ ಮೇರೆಗೆ ಹಳೆಅಂಗಡಿಯಲ್ಲಿ ಒಬ್ಬನನ್ನು, ಪಾಂಡೇಶ್ವರದಲ್ಲಿ ಮೂವರನ್ನು, ಸುಭಾಷನಗರದಲ್ಲಿ ಇಬ್ಬರು ಸ್ಥಳೀಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಲಾಗಿದೆ. ಪಾಂಡೇಶ್ವರ ಮನೆಯಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಮನೆಯಿಂದ ಜಿಹಾದಿ ಪಠ್ಯವಿರುವ ಸಿಡಿ ದೊರೆಕಿದೆ ಎನ್ನಲಾಗಿದೆ. ವಿಚಾರಣೆ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಕ್ಕೆ ಸುಬ್ರಮಣ್ಯದಲ್ಲಿ ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ

ಅನುಮಾನಾಸ್ಪದಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬುಧವಾರ ಕುಕ್ಕೆ ಸುಬ್ರಮಣ್ಯದ ಪೊಲೀಸರು ಬಂಧಿಸಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವಸತಿ ಗೃಹವೊಂದರಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತ ವ್ಯಕ್ತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಹಮ್ಮದ್ ಪೈಸುಲ್ಲ ಹಮೀದ್ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಶಿವಕುಮಾರ್ ಎಂಬ ಹೆಸರಿನಲ್ಲಿ ಸೆ. 29 ರಂದು ಸುಮ್ರಮಣ್ಯ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದುಕೊಂಡಿದ್ದ. ಈತನ ವರ್ತನೆ ಸಂಶಯಾಸ್ಪದವಾಗಿ ಕಂಡ ಬಂದಿದ್ದರಿಂದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಧಾರವಾಡದ ಬಳಿ ಸಜೀವ ಬಾಂಬ್ ಪತ್ತೆ
ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ
ದೆಹಲಿಯಲ್ಲಿ 20 ಕಡೆ ಸ್ಫೋಟಿಸಲು ಸಂಚು ಬಯಲಿಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X