ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ಒಪ್ಪಂದಕ್ಕೆ ಅಮೆರಿಕಾ ಸೆನೆಟ್ ಅನುಮೋದನೆ

By Staff
|
Google Oneindia Kannada News

ವಾಷಿಂಗ್ಟನ್, ಅ.2: ಭಾರತ-ಅಮೆರಿಕ ನಡುವಿನ ಪರಮಾಣು ಒಪ್ಪಂದಕ್ಕೆ ಅಮೆರಿಕ ಸೆನೆಟ್ ಗುರುವಾರ(ಅ.2) ಬೆಳಗಿನ ಜಾವ ಅನುಮೋದನೆ ನೀಡಿದೆ. 100 ಮಂದಿ ಸದಸ್ಯರಿರುವ ಸೆನೆಟ್ ನಲ್ಲಿ 86 ಮಂದಿ ಅಣು ಒಪ್ಪಂದದರ ಪರ ಹಾಗೂ 13 ಮಂದಿ ವಿರೋಧವಾಗಿ ಮತ ಚಲಾಯಿಸಿ ಭಾರಿ ಅಂತರದೊಂದಿಗೆ ಬೆಂಬಲ ಸೂಚಿಸಿದರು. ಅಣು ಒಪ್ಪಂದಕ್ಕೆ ಅಂಕಿತ ಬೀಳುವ ಮುನ್ನ ಹಲವಾರು ವಾದ ವಿವಾದಗಳು, ಚರ್ಚೆಗಳಿಗೆ ಸೆನೆಟ್ ವೇದಿಕೆಯಾಗಿತ್ತು.

ಭಾರತ-ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಮೊದಲು ಅಮೆರಿಕ ಸಂಸತ್ತಿನಲ್ಲಿ ಅನುಮೋದನೆ ದೊರೆಕಿತ್ತು ನಂತರ ಸೆನೆಟ್ ನ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಒಪ್ಪಂದಕ್ಕೆ ಸೆನೆಟ್ ಸಹ ಬೆಂಬಲ ಸೂಚಿಸಿರುವ ಕಾರಣ ಅಮೆರಿಕ ವಿದೇಶಾಂಗ ಸಚಿವೆ ಕಂಡೋಲಿಸಾ ರೈಸ್ ತಮ್ಮ ಭಾರತ ಪ್ರವಾಸವನ್ನು ಶನಿವಾರಕ್ಕೆ ಮುಂದೂಡಿದ್ದಾರೆ. ಭಾರತದಲ್ಲಿ ಅಂದು ರೈಸ್ ಅವರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಒಪ್ಪಂದದಲ್ಲಿನ ಮತ್ತೊಂದು ಗಮನಾರ್ಹ ಅಂಶವೆಂದರೆ, ಭಾರತದ ಅಣ್ವಾಯುಧ ಕಾರ್ಯಕ್ರಮಗಳಿಗೆ ಅಮೆರಿಕಾ ಸಹಾಯ ಮಾಡಬಾರದು ಎಂದು ಡೆಮಕ್ರಾಟಿಕ್ ಪ್ರತಿನಿಧಿಗಳಾದ ಬೈರಾನ್ ದೊರ್ಗಾನ್, ಜೆಫ್ ಬಿಂಗ್ ಮ್ಯಾನ್ ಪ್ರತಿಪಾದಿಸಿದ್ದರು. ಅವರ ಪ್ರತಿಪಾದನೆಗಳನ್ನು ಸೆನೆಟ್ ತಿರಸ್ಕರಿಸಿ ಅಣು ಒಪ್ಪಂದಕ್ಕೆ ಬಹುಮತ ಸೂಚಿಸಿದೆ.

ಈ ಅಣು ಒಪ್ಪಂದ ಅಣ್ವಾಯುಧಗಳ ಸ್ಪರ್ಧೆಗೆ ಎಡೆ ಮಾಡಿಕೊಡುತ್ತದೆ ಎಂದು ಡೆಮಾಕ್ರಾಟಿಕ್ ಅಭ್ಯರ್ಥಿಗಳು, ಇಲ್ಲ ಎರಡು ದೇಶಗಳ ಅಭಿವೃದ್ಧಿಗೆ ಸಹಯವಾಗುತ್ತದೆ ಎಂದು ರಿಪಬ್ಲಿಕ್ ಅಭ್ಯರ್ಥಿಗಳು ವಾದಿಸಿದ್ದರು. ಅಣು ಒಪ್ಪಂದಕ್ಕೆ ಸಂಬಂಧಿಸಿದ ಮತದಾನದಲ್ಲಿ ಅಮೆರಿಕ ಅಧ್ಯಕ್ಷ ಪದವಿಯ ಅಭ್ಯರ್ಥಿಗಳಾದ ಮೆಕ್ ಕೆಯಿನ್, ಬರಾಕ್ ಒಬಾಮಾ, ಉಪಾಧ್ಯಕ್ಷ ಪದವಿ ಅಭ್ಯರ್ಥಿ ಜೋ ಬಿಡೆನ್ ಮತ್ತಿತರು ಪಾಲ್ಗೊಂಡಿದ್ದರು.

(ಏಜೆನ್ಸೀಸ್)

ಭಾರತದ ಪರವಾದ ಐತಿಹಾಸಿಕ ಅಣು ಒಪ್ಪಂದ
ಸೆಪ್ಟೆಂಬರ್ ಒಳಗೆ ಅಣು ಒಪ್ಪಂದ ಸಹಿ : ಅಮೆರಿಕ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X