ಭಜರಂಗ ಮುಖಂಡ ಮಹೇಂದ್ರ ರಾಜೀನಾಮೆ
ಮಂಗಳೂರು, ಅ.2: ಮಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ಗಲಭೆಯ ಹೊಣೆ ಹೊತ್ತು ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ.
ವಿಶ್ವಹಿಂದೂಪರಿಷತ್ ನಿಂದ ಬಂದಿರುವ ಸೂಚನೆ ಮೇರೆಗೆ ಬುಧವಾರ ಮಹೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಭಜರಂಗದಳದ ರಾಷ್ಟ್ರೀಯ ಸಂಚಾಲಕ ಪ್ರಕಾಶ್ ಶರ್ಮ ಅವರಿಗೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಮಂಗಳೂರಿನ ನ್ಯೂ ಲೈಫ್ ಪ್ರಾರ್ಥನಾ ಮಂದಿರ ಸೇರಿದಂತೆ ಹಲವು ಚರ್ಚ್ ಗಳ ಮೇಲೆ ಮತಾಂತರದ ಆರೋಪದ ಮೇಲೆ ನಡೆಸಲಾದ ದಾಳಿಯ ಜವಾಬ್ದಾರಿಯನ್ನು ಮಹೇಂದ್ರ ಕುಮಾರ್ ಹೊತ್ತುಕೊಂಡಿದ್ದಾರೆ.
ಇದಲ್ಲದೆ ದಾಳಿಯ ಬಗ್ಗೆ ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳದ ಹಿರಿಯ ಮುಖಂಡರಿಗೆ ಯಾವುದೇ ಸೂಚನೆ ನೀಡಿರಲಿಲ್ಲ ಎನ್ನಲಾಗಿದೆ.ಇದು ಅವರ ತಲೆದಂಡಕ್ಕೆ ಕಾರಣ ಎನ್ನಲಾಗಿದೆ. ಕೋಮುಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದ್ದು, ಜಾಮೀನು ಸಿಕ್ಕಿದೆ. ಆದರೆ ಬಾಳೆಹೊನ್ನೂರಿನ ಚರ್ಚ್ ದಾಳಿ ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಸದ್ಯ ಮಂಗಳೂರಿನ ಉಪಕಾರಾಗೃಹದಲ್ಲಿ ವಾಸವಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಿಡುಗಡೆ ಭಾಗ್ಯ ಕಾಣದ ಭಜರಂಗಿ ಮಹೇಂದ್ರ
ದತ್ತಮಾಲಾ ಅಭಿಯಾನಕ್ಕೆ ಮಹೂರ್ತ ಸಿದ್ಧ












Click it and Unblock the Notifications