ಗವಾಸ್ಕರ್-ಬಾರ್ಡರ್ ಸರಣಿಗೆ ದಾದಾ ಆಯ್ಕೆ
ನವದೆಹಲಿ. ಅ. 1 : ಅಕ್ಟೋಬರ್ 9 ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಸಮಿತಿ ಘೋಷಣೆ ಮಾಡಿದೆ.
ಆಯ್ಕೆ ಸಮಿತಿ ಹಿರಿಯ ಆಟಗಾರರಿಗೆ ಮಣೆ ಹಾಕಿರುವುದು ವಿಶೇಷವಾಗಿದ್ದು, ಟೆಸ್ಟ್ ತಂಡಕ್ಕೆ ಆಯ್ಕೆಯಾಗದಿದ್ದರೆ ಕ್ರಿಕೆಟ್ ಜೀವನದಿಂದ ನಿವೃತ್ತಿ ಬಯಸಿದ್ದ ಬಂಗಾಲಿ ದಾದಾ ಸೌರವ್ ಗಂಗೂಲಿಗೆ ಮತ್ತೆ ಅವಕಾಶ ನೀಡಿದೆ. ಇದರ ಜೊತೆಗೆ ಮಾಜಿ ನಾಯಕ ರಾಹಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಮತ್ತೆ ಕಣಕ್ಕಿಳಿಸಿದೆ. ಇದರೊಂದಿಗೆ ಹೊಸ ಮುಖಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಅಮಿತ್ ಮಿಶ್ರಾ ಹಾಗೂ ಬದ್ರಿನಾಥ್ ಕಾಂಗರೂಗಳ ವಿರುದ್ಧ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಗವಾಸ್ಕರ್ ಬಾರ್ಡರ್ ಟೆಸ್ಟ್ ಸರಣಿಗೆ ಮೊದಲೆರಡು ಪಂದ್ಯಕ್ಕೆ ಆಯ್ಕೆಯಾದ ಭಾರತೀಯ ತಂಡದ ಸದಸ್ಯರ ವಿವರ
* ಅನಿಲ್ ಕುಂಬ್ಳೆ-(ನಾಯಕ)
* ರಾಹುಲ್ ದ್ರಾವಿಡ್
* ಸಚಿನ್ ತೆಂಡೂಲ್ಕರ್
* ವಿವಿಎಸ್ ಲಕ್ಷ್ಮಣ್
* ಗೌತಮ್ ಗಂಭೀರ್
* ವಿರೇಂದ್ರ ಸೆಹ್ವಾಗ್
* ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್)
* ಆರ್.ಪಿ.ಸಿಂಗ್
* ಇಶಾಂತ್ ಶರ್ಮಾ
* ಮುನಾಫ್ ಪಟೇಲ್
* ಜಾಹೀರ್ ಖಾನ್
* ಅಮಿತ್ ಮಿಶ್ರಾ
* ಎಸ್. ಬದರಿನಾಥ್
* ಹರ್ಭಜನ್ ಸಿಂಗ್
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)












Click it and Unblock the Notifications