ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಿ ಪ್ರಯಾಣಿಕರಿಗೆ ಅಭಿವೃದ್ಧಿ ಶುಲ್ಕದ ಹೊರೆ

By Staff
|
Google Oneindia Kannada News

ಬೆಂಗಳೂರು, ಸೆ.30: ದೇಶಿ ಪ್ರಯಾಣಿಕರು ಇನ್ನು ಮುಂದೆ ಗ್ರಾಹಕಅಭಿವೃದ್ಧಿ ಶುಲ್ಕ [User Development Fee (UDF) ]ದ ವೆಚ್ಚವನ್ನು ಭರಿಸಬೇಕಾಗುತ್ತದೆ. ಆದರೆ ಶುಲ್ಕದ ವೆಚ್ಚ ಹಾಗೂ ಅನುಷ್ಠಾನಗೊಳ್ಳುವ ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಈ ಬಗ್ಗೆ ನಾಗರೀಕ ವಿಮಾನಯಾನ ಇಲಾಖೆಗೆ ಮನವಿ ಕಳಿಸಲಾಗಿದ್ದು, ಶೀಘ್ರದಲ್ಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿಗೆ ಬರಲಿದೆ ಎಂದು ಬಿಐಎ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಅಲ್ಬರ್ಟ್ ಬ್ರೂನರ್ ಹೇಳಿದ್ದಾರೆ.

ಹೈದರಾಬಾದಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ರೀತಿಯ ಅಭಿವೃದ್ಧಿ ಶುಲ್ಕವನ್ನು ಸ್ವೀಕರಿಸಲಾಗುತ್ತಿದೆ. ಏರ್ ಟಿಕೆಟ್ ದರದ ಜೊತೆಗೆ ಹೆಚ್ಚುವರಿಯಾಗಿ 375 ರು. ಗಳನ್ನು ದೇಶಿ ಪ್ರಯಾಣಿಕರಿಂದ ಪಡೆಯಲಾಗುತ್ತಿದೆ. ಚೆಕ್ಕಿಂಗ್ ಇನ್ ಗೆ ಮೊದಲು ಅಥವಾ ಬೋರ್ಡಿಂಗ್ ಕಾರ್ಡ್ ಪಡೆದ ನಂತರ ಈ ಶುಲ್ಕವನ್ನು ಪಾವತಿಸಬಹುದಾಗಿದೆ. ಆದರೆ, ಬೆಂಗಳೂರಿನಲ್ಲಿ ಶುಲ್ಕ ವಸೂಲಿಯ ಸ್ವರೂಪ ಇನ್ನೂ ಬಹಿರಂಗವಾಗಿಲ್ಲ.

ಶುಲ್ಕ ವಸೂಲಾತಿ ಬಗ್ಗೆ ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಲೀಕ ವಿಜಯ್ ಮಲ್ಯ ಅವರನ್ನು ಕೇಳಿದಾಗ, "ನಾವು ಅಭಿವೃದ್ಧಿ ಶುಲ್ಕ ಹೇರಿಕೆಗೆ ವಿರೋಧಿಗಳಲ್ಲ. ಆದರೆ ಪ್ರಯಾಣ ವೆಚ್ಚದ ಜೊತೆಗೆ ಸೇರಿಸುವುದನ್ನು ಸಹಿಸುವುದಿಲ್ಲ. ಬಿಐಎ ನವರು ಪ್ರತ್ಯೇಕವಾಗಿ ಸ್ವೀಕರಿಸಲಿ. ಆಗ ಯಾರಿಗೂ ಗೊಂದಲವಾಗಲಿ, ತೊಂದರೆಯಾಗಲಿ ಇರುವುದಿಲ್ಲ" ಎಂದರು.

ಈ ನಡುವೆ ಬಿಐಎ ನ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಮುಂಬರುವ ಮೂರ್ನಾಲ್ಕು ವರ್ಷಗಳಲ್ಲಿ ಇನ್ನೊಂದು ಟರ್ಮಿನಲ್ ಹಾಗೂ ರನ್ ವೇ ನಿರ್ಮಾಣವಾಗಲಿದೆ. ಸದ್ಯ ಒಂದೆರಡು ವರ್ಷಗಳ ತನಕ ಈಗಿರುವ ಮೂಲಸೌಕರ್ಯಗಳ ಬಳಸಿ ಪ್ರಯಾಣಿಕರ ಟ್ರಾಫಿಕ್ ಅನ್ನು ನಿಭಾಯಿಸಲಾಗುವುದು ಎಂದು ಬ್ರೂನರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X