ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ 2 ಶಂಕಿತ ಉಗ್ರರ ಬಂಧನ

By Staff
|
Google Oneindia Kannada News

ಮೈಸೂರು, ಸೆ. 29 : ರಾಜ್ಯದ ವಿವಿಧ ಭಾಗಗಳಲ್ಲಿ ಉಗ್ರರಿರುವ ವಾಸನೆ ದಟ್ಟವಾಗುತ್ತಿರುವ ಬೆನ್ನಲ್ಲೇ ದಸರಾ ಹಬ್ಬ ಕೆಲ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಬ್ಬರ ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಸೆ. 26 ರಂದು ಧಾರವಾಡ ಹೊರವಲಯದ ಸಿಂಗನಹಳ್ಳಿ ಸೇತುವೆ ಕೆಳಗೆ ಬಾಂಬ್ ಇಟ್ಟಿದ್ದ ಪ್ರಕರಣ ಹಿಂದೆಯೇ ಮೈಸೂರಿನಲ್ಲಿ ಶಂಕಿತ ಉಗ್ರರ ಬಂಧನವಾಗಿರುವುದು ಸಹಜವಾಗಿಯೇ ಜನರಲ್ಲಿ ತೀವ್ರ ಆತಂಕ ಮೂಡಿದೆ.

ದಸರಾ ವೇಳೆಯಲ್ಲಿ ಶಾಂತಿ ಕದಡಲು ಬಂಧಿತ ಇಬ್ಬರು ಶಂಕಿತರು ತಯಾರಿ ನಡೆಸಿದ್ದರು. ಅಗತ್ಯ ಮಾಹಿತಿ ಮೇರೆಗೆ ಈ ಇಬ್ಬರನ್ನು ಎರಡು ದಿನಗಳ ಹಿಂದೆಯೇ ಬಂಧಿಸಲಾಗಿದೆ. ಬಂಧಿತ ಶಂಕಿತರಿಂದ ಮಾರಾಕಾಸ್ತ್ರಗಳ ದೊರೆತಿವೆ ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಅವರ ಮೇಲೆ ಅನುಮಾನ ಬಂದಿದ್ದರಿಂದ ಬಂಧಿಸಲಾಗಿದೆ. ವಿಚಾರಣೆ ನಂತರ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಶಂಕಿತರನ್ನು ಅಝರ್ ಮೂಹ್ಮದ್ ಹಾಗೂ ಇನ್ನೊಬ್ಬಾತನ ಹೆಸರು ತಿಳಿದು ಬಂದಿಲ್ಲ.

ದಸರಾ ಹಬ್ಬಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಮೈಸೂರು ಪೊಲೀಸರು ಕಾರ್ಯಚರಣೆ ನಡೆಸಿ ಈ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಳೆಯಿಂದ ನಾಡಹಬ್ಬ ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ನವವಧುವಿನಂತೆ ಶೃಂಗಾರಗೊಂಡಿದೆ. ಝಗಮಗಿಸುವ ಬೆಳಕಿನಿಂದ ಅರಮನೆ ಕಣ್ಮನ ಸೆಳೆಯತೊಡಗಿದೆ. ವಿದ್ಯುತ್ ದೀಪಾಂಲಕೃತ ಬೆಳಕು ರಾರಾಜಿಸುತ್ತಿದೆ. ಭವ್ಯ ಹಬ್ಬಕ್ಕೆ ಮೈಸೂರು ನಗರ ಸಂಪೂರ್ಣ ಸಿದ್ದಗೊಂಡಿದೆ.

(ದಟ್ಸ್ ಕನ್ನಡ ವಾರ್ತೆ)

ಸರಣಿಸ್ಫೋಟದ ರುವಾರಿ ಸಿಮಿ ಉಗ್ರ ಸೆರೆ
ಸಿಮಿ ನಿಷೇಧಕ್ಕೆ ಸಿದ್ಧ : ವೆಂಕಯ್ಯ ನಾಯ್ಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X