ದೆಹಲಿ ಸ್ಫೋಟ : ಮತ್ತೆ ಮೂವರು ಉಗ್ರರ ಸೆರೆ
ನವದೆಹಲಿ, ಸೆ. 21 : ಸೆಪ್ಟೆಂಬರ್ 13ರಂದು ರಾಜಧಾನಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತೆ ಮೂವರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಉಗ್ರರು ದೇಶದಲ್ಲಿ ಇತ್ತೀಚೆಗೆ ನಡೆದ ಐದು ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.
ಜಿಯಾ ಖಾನ್, ಶಕೀಲ್ ಹಾಗೂ ಶಾಕೀರ್ ಉರ್ ರೆಹಮಾನ್ ಬಂಧಿತ ಉಗ್ರರು. ದೆಹಲಿ ಪೊಲೀಸ್ ಇಲಾಖೆಯ 13 ಜನರ ವಿಶೇಷ ತಂಡವೊಂದು ಇಂದು ನಡೆಸಿದ ಮಹತ್ವದ ಕಾರ್ಯಚರಣೆಯಲ್ಲಿ ಈ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಉಗ್ರರು ಜೈಪುರ, ಅಹಮದಾಬಾದ್ ಹಾಗೂ ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ದೆಹಲಿ ಪೊಲೀಸರಿಗೆ ದೊರೆತಿದೆ.
ಕಳೆದ ಶನಿವಾರ ದೆಹಲಿಯ ಜಾಮಿಯಾ ನಗರದ ಬಟ್ಲಾ ಹೌಸ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಬಷರ್ ಅಲಿಯಾಸ್ ಅತೀಫ್ ಹಾಗೂ ಮೂಹ್ಮದ್ ಸಾಜಿದ್ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು. ಅದೇ ಸಂದರ್ಭದಲ್ಲಿ ಮೊಹ್ಮದ್ ಸೈಫ್ ಹಾಗೂ ಜೀಶಾನ್ ಎಂಬ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಸೈಫ್ ನಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿ
ದಿಟ್ಟ ಪೊಲೀಸ್ ಅಧಿಕಾರಿ ಶರ್ಮಾಗೆ ನಮನ
ದಿಲ್ಲಿಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್
ದಿಲ್ಲಿ ಸ್ಫೋಟ : ಬಿಜಾಪುರದಲ್ಲಿ ಶಂಕಿತನ ಬಂಧನ












Click it and Unblock the Notifications