ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲನೆ ಪಾಲನೆ ರಜೆ ಒಟ್ಟು ಮೂರುವರ್ಷಕ್ಕೆ ಏರಿಕೆ

By Staff
|
Google Oneindia Kannada News

Baby care*ಬಿ. ಮಂಜುನಾಥ, ನವದೆಹಲಿ.

ನವದೆಹಲಿ, ಸೆ. 16 : ಖಾಸಗಿ ಕಂಪನಿಗಳಲ್ಲಿ ನೌಕರಿ ಮಾಡುವ ಮಹಿಳೆಯರಿಗೆ ಒಂಥರಾ ಹೊಟ್ಟೆಕಿಚ್ಚು ತರಿಸುವ ಸುದ್ದಿಯೊಂದು ಕೇಂದ್ರ ಸರಕಾರದಿಂದ ಹೊರಬಿದ್ದಿದೆ. ಅದೇನೆಂದರೆ, ತನ್ನ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕೇಂದ್ರ ಸರಕಾರವು ನೀಡುತ್ತಿರುವ ಹೆರಿಗೆ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸಿರುವುದಷ್ಟೇ ಅಲ್ಲದೆ ಮಕ್ಕಳ ಲಾಲನೆ ಪಾಲನೆಗೆ 2 ವರ್ಷಗಳ ಕಾಲ ಸಂಬಳ ಸಮೇತ ರಜೆ ನೀಡಲು ನಿರ್ಧರಿಸಿದೆ.

ಒಂದೇ ಹೆರಿಗೆ ಆಗಿದ್ದರೂ ಪರವಾಗಿಲ್ಲ. ಒಂದೇ ಒಂದು ಮಗು ಹೆತ್ತ ತಾಯಂದಿರೂ ಕೂಡ ಎರಡು ವರ್ಷ ಲಾಲನೆ ಪಾಲನೆ ರಜಾ ಅನುಭವಿಸಲು ಅರ್ಹರಾಗುತ್ತಾರೆ. ಕೇಂದ್ರ ಸರಕಾರದ ಮಹಿಳಾ ನೌಕರರು ತಮ್ಮ ಒಟ್ಟು ಸೇವಾ ಅವಧಿಯಲ್ಲಿ ಒಟ್ಟಾರೆ 2 ವರ್ಷ ಮಕ್ಕಳ ಆರೈಕೆ ರಜೆ ತೆಗೆದುಕೊಳ್ಳಬಹುದು. ಎರಡು ವರ್ಷದ ಸಂಬಳ ( ಒಟ್ಟು 730 ದಿವಸ)ಸಿಗತ್ತೆ ಮತ್ತು ಅವರ ಸೇವಾ ಹಿರಿತನತಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಅಂದಹಾಗೆ ಹೊಸ ನಿಯಮಾವಳಿ ಇದೇ ಸೆಪ್ಟೆಂಬರ್ 1 ( 2008) ನೆ ತಾರೀಕಿನಿಂದ ಜಾರಿಗೆ ಬಂದಿರುತ್ತದೆ.

ಆರನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಆರೈಕೆ ರಜೆಯನ್ನು ಮಕ್ಕಳು 18 ವರ್ಷ ಪೂರೈಸುವ ತನಕ ಯಾವಾಗ ಬೇಕಾದರೂ ಪಡೆಯಬಹುದು. ಎರಡೇ ಮಕ್ಕಳನ್ನು ಹೆರುವ ಮಿತಿ ಅನುಸರಿಸು ಮಹಿಳಾಮಣಿಗಳು ತಮ್ಮ ಸೇವಾ ಅವಧಿಯಲ್ಲಿ ಎಲ್ಲಾ ಲೆಕ್ಕ ಹಾಕಿದರೆ 3 ವರ್ಷ ರಜಾ ತೆಗೆದು ಕೊಳ್ಳಲು ಅವಕಾಶವಿದೆ.

ಮಕ್ಕಳ ಆರೈಕೆ ರಜೆಯನ್ನು ನಾನಾ ಕಾರಣಗಳಿಗಾಗಿ ಪಡೆಯಬಹುದು. ಮಕ್ಕಳನ್ನು ಕೈ ಹಿಡಿದು ಬೆಳೆಸುವ ಕಾಲ, ಪರೀಕ್ಷೆಗಳ ಸಮಯ ಅಥವಾ ಕಾಯಿಲೆ ಕಸಾಲೆ ಮುಂತಾದ ಸಂದರ್ಭಗಳನ್ನು ನಿಭಾಯಿಸುವ ಸಮಯದಲ್ಲಿ ರಜಾ ಚೀಟಿಯನ್ನು ಸಲ್ಲಿಸಬಹುದು. ಈ ಸುದ್ದಿಯಿಂದ ಕೇಂದ್ರ ಸರಕಾರಿ ನೌಕರರು ತುಂಬಾ ಹರ್ಷಿತರಾಗಿದ್ದಾರೆ. ಗಂಡಸರೂ ಸಹ. ಯಾಕೆಂದರೆ, ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಮನೆಯಲ್ಲಿ ಯಾರೋ ಒಬ್ಬರಿಗೆ ಜಾಸ್ತಿ ರಜಾ ಸಿಕ್ಕರೆ ಅದಕ್ಕಿಂತ ಇನ್ನೇನು ಬೇಕು.

ಬ್ಯಾಂಕು, ಎಲ್ ಐಸಿ, ಪಿಎಸ್ ಯು ಮುಂತಾದ ಕಚೇರಿಗಳಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ ಇದು ಶುಭ ಸಮಾಚಾರವೇ ಹೌದು. ಮಕ್ಕಳು 18 ವರ್ಷ ದಾಟಿದವರಾಗಿದ್ದರೆ, ಅಥವಾ ನಿವೃತ್ತಿ ಕಾಲದತ್ತ ಧಾವಿಸುತ್ತಿರುವ ಉದ್ಯೋಗಿಗಳಾಗಿದ್ದರೆ ಹೊಸ ನಿಯಮಾವಳಿಯಿಂದ ಏನೂ ಪ್ರಯೋಜನವಿಲ್ಲ.

ಹೆರಿಗೆ ರಜೆ ವಿಚಾರದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುವ ಹೆಣ್ಣುಮಕ್ಕಳಿಗೆ ಪಾಪ, ರಜೆ ಕಡಿಮೆ. ಏನೇನೂ ಸಾಲದು. ಮೆಡಿಕಲ್ ಲೀವು, ಕ್ಯಾಷುಯಲ್ ಲೀವು ಅರ್ನ್ಡ ಲೀವುಗಳನ್ನು ಹೊರತುಪಡಿಸಿದರೆ ಮಹಿಳಾ ಉದ್ಯೋಗಿಗೆ ಸಿಗುವ ರಜ 90 ದಿನಗಳನ್ನು ದಾಟುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X