ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಮತ್ತೆ ನಾಲ್ವರಿಗೆ ಚೂರಿ ಇರಿತ

By Staff
|
Google Oneindia Kannada News

ಮಂಗಳೂರು, ಸೆ. 16 : ಚರ್ಚ್ ಗಳ ಮೇಲಿನ ದಾಳಿ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಮೂರನೇ ದಿನವೂ ಮುಂದುವರೆದಿದ್ದು, ಇಂದು ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಗಂಪು ಘರ್ಷಣೆ ಉಂಟಾಗಿದೆ. ಬಂಟ್ವಾಳದಲ್ಲಿ ನಾಲ್ಕು ಮಂದಿಗೆ ಚೂರಿ ಇರಿತವಾಗಿರುವ ಘಟನೆ ನಡೆದಿದೆ. ಚೂರಿ ಇರಿತಕ್ಕೆ ಒಳಗಾದ ನಾಲ್ವರಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಪೊಲೀಸರು ಇಂದು ಕೂಡ ಲಾಠಿ ಪ್ರಹಾರ ನಡೆಸಿದ್ದು, ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳುಲು ಭಾರಿ ಯತ್ನ ನಡೆಸುತ್ತಿದ್ದಾರೆ.

ಕಲ್ಲಡ್ಕ, ಪಾಣೆಮಂಗಳೂರು ಹಾಗೂ ಪರಂಗಿಪೇಟೆಯಲ್ಲಿ ಇಂದು ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದ್ದು, ಕಲ್ಲಡ್ಕದಲ್ಲಿ ಗುಂಪು ಘರ್ಷಣೆ ನಡೆದಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಬಂಟ್ವಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ನಾಲ್ವರ ಮೇಲೆ ಚೂರಿ ಇರಿತವಾಗಿದೆ. ಚೂರಿ ಇರಿತಕ್ಕೆ ಒಳಗಾದ ನಾಲ್ವರಲ್ಲಿ ಇಬ್ಬರಿಗೆ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡಿರುವವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಶ್ರೀರಾಮಸೇನೆ ಬಂದ್ ಯಶಸ್ವಿ

ಆ ಮಧ್ಯೆ ಸೋಮವಾರ ಶ್ರೀರಾಮಸೇನೆ ಕಾರ್ಯಕರ್ತರೊಬ್ಬರಿಗೆ ಚಾರಿ ಇರಿತವಾಗಿರುವುದನ್ನು ಖಂಡಿಸಿ ಇಂದು ಶ್ರೀರಾಮ ಸೇನೆ ನೀಡಿರುವ 'ಮಂಗಳೂರು ಬಂದ್' ಕರೆ ಸಂಪೂರ್ಣ ಯಶಸ್ವಿಯಾಗಿದೆ. ಶಾಲಾ ಕಾಲೇಜುಗಳು ಬಂದ್ ಮಾಡಲಾಗಿದೆ. ಸರ್ಕಾರಿ ಕಚೇರಿಗಳ ಕೆಲಸದಲ್ಲಿ ತುಸು ವ್ಯತ್ಯಾಯ ಉಂಟಾಗಿದೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರ್ವಜನಿಕರು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಂಗಡಿ ಮುಂಗಟ್ಟು ಗಳನ್ನು ಬಂದ್ ಆಗಿವೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕ ಘಟನೆ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಯಥಾ ಸ್ಥಿತಿಗೆ ಮಂಗಳೂರು : ಆಚಾರ್ಯ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಗೃಹ ಸಚಿವ ವಿ.ಎಸ್.ಆಚಾರ್ಯ, ಮಂಗಳೂರು ಯಥಾಸ್ಥಿತಿಗೆ ಮರಳತೊಡಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಬೇಕಿರುವ ಎಲ್ಲ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮತೀಯ ಗಲಭೆಯಾಗಿದ್ದರಿಂದ ಪರಿಸ್ಥಿತಿ ನಿಧಾನವಾಗಿ ಹತೋಟಿಗೆ ಬರಲಿದೆ ಎಂದು ಆಚಾರ್ಯ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಬಲವಂತ ಮತಾಂತರ ವಿರುದ್ಧ ಈಶ್ವರಪ್ಪ ಎಚ್ಚರಿಕೆ
ಮಂಗಳೂರು :ಭಜರಂಗದಳ ಕಾರ್ಯಕರ್ತರ ಬಂಧನ
ಮತಾಂತರ ಪ್ರಕರಣ: ಉಡುಪಿ ಪೊಲೀಸ್ ವರದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X