ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡಕ್ಕೆ ಟಾಟಾ ಮಾರ್ಕೋಪೊಲೋ ಬಸ್

By Staff
|
Google Oneindia Kannada News

ಧಾರವಾಡ, ಸೆ. 16 : ಧಾರವಾಡ-ಬೆಳಗಾವಿಯ ಹೆದ್ದಾರಿಯ ಬೇಲೂರು ಸಮೀಪ ಟಾಟಾ ಮೋಟಾರ್ಸ್ ಆವರಣದಲ್ಲಿ ಟಾಟಾ ಮಾರ್ಕೋಪೊಲೋ-ವೋಲ್ವೊ ಬಸ್ಸುಗಳ ಉತ್ಪಾದನೆಯು ಇದೇ ನವೆಂಬರ್ ನಲ್ಲಿ ಆರಂಭವಾಗಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ಪ್ರತಿ ವರ್ಷ 20 ಸಾವಿರ ಬಸ್ಸುಗಳು ಉತ್ಪಾದನೆಯ ಗುರಿಯೂಂದಿಗೆ 346 ಕೋಟಿ ರುಪಾಯಿ ವೆಚ್ಚದಲ್ಲಿ ಉತ್ಪಾದನಾ ಘಟಕ ಸಜ್ಜಾಗುತ್ತಿದೆ. ಘಟಕ ನಿರ್ಮಾಣದ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಘಟಕದಲ್ಲಿ ಒಂದು ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ ಎದು ಅವರು ವಿವರಿಸಿದರು. ಟಾಟಾ ಟೆಲ್ಕಾನ್, ಟಾಟಾ ಮಾರ್ಕೋಪೊಲೋ ಘಟಕಗಳಿಗೆ ಸೋಮವಾರ ಬೇಟಿ ನೀಡಿದ ಸಚಿವ ಮುರುಗೇಶ ನಿರಾಣಿ, ಟಾಟಾ ಕಾಮಗಾರಿಯ ಪ್ರಗತಿ ಹಂತಗಳ ಮಾಹಿತಿ ಪಡೆದುಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಹಿಚಾಚಿ ಯಂತ್ರಗಳ ಟಾಟಾ ಟೆಲ್ಕಾನ್ ಬಾಡಿ ಬಿಲ್ಡಿಂಗ್ ಘಟಕವು 116 ಎಕರೆಗಳ ವಿಸ್ತೀರ್ಣದಲ್ಲಿದೆ. ಇಲ್ಲಿ 400 ಮಂದಿಗೆ ಉದ್ಯೋಗ ದೊರಕಿದೆ, ಸ್ಥಳೀಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ಆವರಣದಲ್ಲಿ ಟಾಟಾ ಮೋಟಾರ್ಸ್ ಲಾರಿ ಉತ್ಪಾದನಾ ಘಟಕವು ಸುಮಾರು 1700 ಕೋಟಿ ರುಪಾಯಿ ಬಂಡವಾಳ ಹೂಡಿಕೆಯೊಂದಿಗೆ ನಿರ್ಮಾಣಗೊಳ್ಳಲಿದೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X