ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡ್ಮಿಂಟನ್: ಸೈನಾ ಮುಡಿಗೆ ಚೀನಾದ ಕಿರೀಟ

By Staff
|
Google Oneindia Kannada News

Saina wins Chinese GPನವದೆಹಲಿ, ಸೆ. 14: ಭಾರತದ ಹೆಮ್ಮೆಯ ಬಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಚೀನಾ ತೈಪೆ ಓಪನ್ ಗ್ರಾನ್ ಪ್ರೀಯನ್ನು ಭಾನುವಾರಗೆದ್ದು ಸಾಧನೆ ಮೆರೆದಿದ್ದಾರೆ.
ಮಲೇಷಿಯಾದ ಲಿಯಾ ಲಿಡಿಯಾ ಚೆಹಾ ಅವರನ್ನು 21-8, 21-19, ನೇರ ಸೆಟ್ ಗಳಲ್ಲಿ ಸೋಲಿಸಿ ಸೈನಾ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸೆಮಿಸ್ ನಲ್ಲಿ ಇಂಡೋನೇಷಿಯಾದ ಪಿಯಾ ಜೆಹಾದಿಯಾ ಬರ್ನಡ್ ಅವರನ್ನು ಸುಲಭವಾಗಿ ಸೋಲಿಸಿ ಸೈನಾ ಫೈನಲ್ ತಲುಪಿದ್ದರು. ಸೆಮಿಸ್ ನಲ್ಲಿ 21-7, 21-11ರಲ್ಲಿ ಜಯಗಳಿಸಿದ್ದರು. ಈ ಮೂಲಕ ಎರಡು ಗ್ರಾನ್ ಪ್ರೀಫೈನಲ್ಸ್ ತಲುಪಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿದರು.

ಒಲಿಂಪಿಕ್ಸ್ ಗೆ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡ ಸೈನಾ, ಕ್ವಾಟರ್ ಫೈನಲ್ ತನಕ ತಲುಪಿ, ಉತ್ತಮ ಸಾಧನೆ ಮೆರೆದಿದ್ದರು. 2006 ರಲ್ಲಿ ಫಿಲಿಫೈನ್ಸ್ ಗ್ರಾನ್ ಪ್ರೀಯನ್ನು ಗೆದ್ದ ಸಾಧನೆ ಕೂಡಸೈನಾ ಹೆಸರಲ್ಲಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ಒಲಿಂಪಿಕ್ಸ್: ಕ್ವಾಟರ್ ಫೈನಲ್ ನಲ್ಲಿ ಮುಗ್ಗರಿಸಿದ ಸೈನಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X