ಪಂಕಜ್ ಅಡ್ವಾಣಿಗೆ ಒಂದು ಲಕ್ಷ ರು. ಬಹುಮಾನ
ಬೆಂಗಳೂರು, ಸೆ. 11 : ನಗರದಲ್ಲಿ ನಡೆದ ಐಬಿಎಸ್ಎಫ್ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಪಡೆದಿರುವ ಬೆಂಗಳೂರಿನ ಪಂಕಜ್ ಅಡ್ವಾಣಿ ಅವರಿಗೆ ರಾಜ್ಯ ಸರ್ಕಾರ 1 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ. ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಗೂಳಿಹಟ್ಟಿ ಶೇಖರ್ ಈ ಬಹುಮಾನ ಪ್ರಕಟಿಸಿದ್ದಾರೆ.
ಅಡ್ವಾಣಿಗೆ 'ಡಬಲ್' ಪ್ರಶಸ್ತಿ
ನಗರದಲ್ಲಿ ಬುಧವಾರ ನಡೆದ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ ಟೈಮ್ ಫಾರ್ಮೆಟ್ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅನುಭವಿ ಆಟಗಾರ ದೇವೇಂದ್ರ ಜೋಶಿ ಅವರನ್ನು ಪರಾಭವಗೊಳಿಸುವ ಮೂಲಕ ಡಬಲ್ ಪ್ರಶಸ್ತಿ ಗೆದ್ದ ಗೌರವಕ್ಕೆ ಪಾತ್ರರಾದರು.
ಇಲ್ಲಿನ ಕೆಎಸ್ ಬಿಎ ಹಾಲ್ ನಲ್ಲಿ ನಡೆದ ಪಂದ್ಯದಲ್ಲಿ ಬಿಲಿಯರ್ಡ್ಸ್ ನ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಮುಂದೆ ಜೋಶಿ ಅವರ ಆಟ ನಡೆಯಲಿಲ್ಲ. ಒಂದರ್ಥದಲ್ಲಿ ಏಕಪಕ್ಷೀಯ ಪಂದ್ಯ ಎನ್ನಬಹುದು. ಪ್ರತಿ ಹಂತದಲ್ಲಿಯೂ ಪಂಕಜ್ ಮೇಲುಗೈ ಸಾಧಿಸುತ್ತಾ ಹೋದರು. ಫೈನಲ್ ಪಂದ್ಯದಲ್ಲಿ ಪಂಕಜ್ 2368-2022 ಪಾಯಿಂಟ್ ಗಳ ಅಂತರದಿಂದ ಜೋಶಿ ಅವರನ್ನು ಸೋಲಿಸಿದರು.
ಮೊದಲ ಅವಧಿಯಲ್ಲಿಯೇ ಭಾರಿ ಬ್ರೇಕ್ ಗಳನ್ನು ಪಡೆದ ಪಂಕಜ್, ಈ ಹಂತದಲ್ಲಿ 1274-151 ಪಾಯಿಂಟ್ ಗಳ ಬೃಹತ್ ಮುನ್ನಡೆ ಪಡೆದರು. ಆದರೆ ಎರಡನೇ ಅವಧಿಯ ಆಟದಲ್ಲಿ ಕೊಂಚ ಪ್ರತಿರೋಧ ಒಡ್ಡಲು ಜೋಶಿ ಪ್ರಯತ್ನಿಸಿದರಾದರೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಯದಾಗಿ ಪಂಕಜ್ ಗೆಲ್ಲುವ ಮೂಲಕ ಡಬಲ್ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರರಾದರು.
2005 ಮತ್ತು 2007ರಲ್ಲಿ ರಲ್ಲಿ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅವರ ಶ್ರೇಷ್ಠ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ 2005ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರಕೂಡ2007ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
(ದಟ್ಸ್ ಕನ್ನಡ ವಾರ್ತೆ)
ಐಬಿಎಸ್ಎಫ್ ಕಿರೀಟ ಮುಡಿಗೇರಿಸಿಕೊಂಡ ಪಂಕಜ್












Click it and Unblock the Notifications