ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಭಾಷಾ ನಾಮಫಲಕ ವಿರುದ್ಧ ಕರವೇ ಹೋರಾಟ

By Staff
|
Google Oneindia Kannada News

ಬೆಂಗಳೂರು, ಸೆ.10: ಕರ್ನಾಟಕ ರಕ್ಷಣಾ ವೇದಿಕೆ ಪರಭಾಷಾ ನಾಮಫಲಕಗಳ ವಿರುದ್ಧ ಆಂದೋಲನವನ್ನು ಕೈಗೊಂಡಿದೆ. ಪ್ರಾದೇಶಿಕ ಭಾಷಾ ನೀತಿ ಅನ್ವಯ ರಾಜ್ಯದಲ್ಲಿ ಕನ್ನಡಕ್ಕೇ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಈ ಆಂದೋಲನವನ್ನು ರೂಪಿಸಲಾಗಿದೆ.

ಅಂಗಡಿ-ಮುಂಗಟ್ಟುಗಳು, ರಾಜ್ಯ ಹಾಗೂ ಕೇಂದ್ರಾಡಳಿತಕ್ಕೆ ಒಳಪಟ್ಟ ಸರ್ಕಾರದ ಎಲ್ಲ ಕಚೇರಿ ನಾಮಫಲಕಗಳೂ ಕನ್ನಡದಲ್ಲೇ ಇರಬೇಕು ಎಂದು ಕರವೇ ಪ್ರತಿಪಾದಿಸುತ್ತಿದೆ. ಬೆಂಗಳೂರಿನಲ್ಲಿ ಕನ್ನಡೇತರ ಭಾಷೆಯಲ್ಲಿರುವ ನಾಮಫಲಕಗಳನ್ನು ನಿರ್ನಾಮ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈ ಮಹತ್ ಕಾರ್ಯಕ್ಕಾಗಿ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡ ಕಾರ್ಯಪಡೆಯನ್ನು ಕರವೇ ಸಜ್ಜುಗೊಳಿಸಿದೆ.

10 ತಂಡಗಳಲ್ಲಿರುವ ಕಾರ್ಯಪಡೆ ಸೆ.10ರಿಂದ ಮುಂದಿನ 20 ದಿನಗಳ ಕಾಲ ನಗರದ ಎಲ್ಲೆಡೆ ಸಂಚರಿಸಿ ಕನ್ನಡದಲ್ಲೇ ನಾಮಫಲಕಗಳನ್ನು ಹಾಕಲು ಮನವಿ ಮಾಡಲಿದೆ. ಪರಭಾಷಾ ನಾಮಫಲಕಗಳನ್ನು ಬಳಸುತ್ತಿರುವವರಿಗೆ ಒಂದು ವಿಧದಲ್ಲಿ ಇದು ಎಚ್ಚರಿಕೆ ಗಂಟೆ ಇದ್ದಂತೆ. ಒಂದು ವೇಳೆ ಈ ಮನವಿಗೆ ಜಗ್ಗಲಿಲ್ಲ ಎಂದರೆ ಆ ನಾಮಫಲಕಗಳು ಧ್ವಂಸವಾಗಲಿವೆ ಎಂದು ಟಿ.ಎ.ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಬರೀ ಅಂಗಡಿ ಮುಂಗಟ್ಟುಗಳ ನಾಮಫಲಕಗಳಷ್ಟೇ ಅಲ್ಲ ಸಮಸ್ತ ನಾಮಫಲಕಗಳು ಕನ್ನಡದಲ್ಲೇ ಇರಬೇಕು. ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಇದಕ್ಕಾಗಿ ಎಂತಹ ಹೋರಾಟಕ್ಕಾದರೂ ಸಿದ್ಧ ಎಂದು ನಾರಾಯಣ ಗೌಡರು ಹೇಳಿದರು. ಗಡುವಿನ ಅವಧಿಯಲ್ಲಿ ಎಲ್ಲಡೆ ಕನ್ನಡ ನಾಮಫಲಕಗಳು ಕಂಡುಬರದಿದ್ದಲ್ಲಿ ಹೋರಾಟ ನಡೆಸುವುದಷ್ಟೇ ಅಲ್ಲದೆ, ಪರಭಾಷಾ ನಾಮಫಲಕಗಳನ್ನು ಧ್ವಂಸ ಮಾಡಲಾಗುತ್ತದೆ ಎಂದ ನಾರಾಯಣ ಗೌಡ.

(ದಟ್ಸ್ ಕನ್ನಡ ವಾರ್ತೆ)
ಟಿ.ಎ.ನಾರಾಯಣ ಗೌಡರು ಎಲ್ಲಿಹೋದರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X