ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಜರ್ ಫೆಡರರ್ ಗೆ ಯುಎಸ್ ಓಪನ್ ಗರಿ

By Staff
|
Google Oneindia Kannada News

Federer clinches US open tennis titleನ್ಯೂಯಾರ್ಕ್, ಸೆ. 9 : ಕೊನೆಗೂ ಅಗ್ರಕ್ರಮಾಂಕದ ಟೆನ್ನಿಸ್ ಆಟಗಾರ ಸ್ವಿಸ್ ನ ರೋಜರ್ ಫೆಡರರ್ ಸೋಲಿನ ಸುಳಿಯಿಂದ ಹೊರಬಂದಿದ್ದಾರೆ. ಇಲ್ಲಿ ನಡೆದ ಯುಎಸ್ ಓಪನ್ ಟೆನ್ನಿಸ್ ಫೈನಲ್ ಪಂದ್ಯದಲ್ಲಿ 6-2, 7-5, 6-2 ಸೆಟ್ ಗಳಲ್ಲಿ ಬ್ರಿಟನ್ ನ ಅಂಡ್ಯಿ ಮರ್ರೆ ಅವರನ್ನು ಮಣಿಸುವ ಮೂಲಕ ಐದನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

2008 ರೋಡರ್ ಫಡರರ್ ಪಾಲಿಗೆ ಅಕ್ಷರಶಃ ಬರಗಾಲ ಎನ್ನಬಹುದು. ಅವರಾಡಿದ ಪ್ರತಿ ಟೂರ್ನಿಯಲ್ಲೂ ಸೋಲು ಬೆಂಬಿಡದೆ ಕಾಡಿದ ಹಿನ್ನೆಲೆಯಲ್ಲಿ ಈ ವರ್ಷ ಪ್ರಶಸ್ತಿ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಸೆಮಿಫೈನಲ್ ಹಂತದಲ್ಲಿ ಸ್ಪೇನಿನ ರಾಫೆಲ್ ನಡಾಲ್ ಅವರು ಮರ್ರೆ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ಹೊರನಡೆದಿದ್ದರಿಂದ ರೋಜರ್ ಫೆಡರರ್ ಐದನೇ ಬಾರಿಗೆ ಯುಸ್ ಓಪನ್ ಕಿರೀಟ ಧರಿಸುವ ಕನಸು ಹುಟ್ಟಿಕೊಂಡಿತು.

ಕಳೆದ 72 ವರ್ಷಗಳಿಂದ ಬ್ರಿಟನ್ ಯುಎಸ್ ಒಪನ್ ಟೆನ್ನಿಸ್ ಪ್ರಶಸ್ತಿ ಗಳಿಸದೆ ಬ್ರಿಟನ್ ವನವಾಸ ಅನುಭವಿಸುತ್ತಿದೆ. ಅಂಡ್ಯಿ ಮರ್ರೆ 2008ರ ಯುಎಸ್ ಟೂರ್ನಿಯಲ್ಲಿ ಸ್ಪೇನಿನ ರಫೆಲ್ ನಡಾಲ್ ಅವರನ್ನು ಮಣಿಸಿ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದರು. ಇದರಿಂದ ಬ್ರಿಟನ್ ಈ ಸಲ ಯುಎಸ್ ಓಪನ್ ಪ್ರಶಸ್ತಿ ಗಳಿಸುವ ಕನಸು ಚಿಗುರೊಡೆದಿತ್ತು. ಆದರೆ ಫೈನಲ್ ನಲ್ಲಿ ರೋಜರ್ ಫೆಡರರ್ ಅವರ ಶ್ರೇಷ್ಠ ಪ್ರದರ್ಶನದ ಮುಂದೆ ಮರ್ರೆ ಆಟ ನಡೆಯಲಿಲ್ಲ. ತೀವ್ರ ಪ್ರತಿರೋಧ ಒಡ್ಡಿದರಾದರೂ ಮರ್ರೆ ಗೆಲುವಿನ ಸಂಭ್ರಮಕ್ಕೆ ಫೆಡರರ್ ಆಸ್ಪದ ನೀಡಲಿಲ್ಲ. ರೋಜರ್ ಫೆಡರರ್ ತಮ್ಮ ಜೀವನದಲ್ಲಿ 13 ಗ್ರಾನ್ ಸ್ಲಾಂ ಪ್ರಶಸ್ತಿ ಗಳಿಸಿದ್ದು, ಇನ್ನೊಂದು ಪ್ರಶಸ್ತಿ ಗಳಿಸಿದಲ್ಲಿ 14 ಗ್ರಾಮ್ ಸ್ಲಾಂ ಪ್ರಶಸ್ತಿ ಗಳಿಸಿರುವ ಅಮೆರಿಕದ ಪೀಟ್ ಸ್ಯಾಂಪ್ರಸ್ ಅವರನ್ನು ಸರಿಗಟ್ಟಿ ದಾಖಲೆ ನಿರ್ಮಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಯುಎಸ್ ಓಪನ್ ಟೆನ್ನಿಸ್ : ಸೆರೆನಾಗೆ ಚಾಂಪಿಯನ್ ಶಿಪ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X