ಐಬಿಎಸ್ಎಫ್ ಟೂರ್ನಿ : ಪಂಕಜ್ ಫೈನಲ್ ಗೆ
ಬೆಂಗಳೂರು, ಸೆ. 9 : ನಗರದಲ್ಲಿ ನಡೆದಿರುವ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನ ಟೈಮ್ ಫಾರ್ಮೆಟ್ ಸೆಮಿಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ ಅನುಭವಿ ಆಟಗಾರ ಗೀತ ಸೇಥಿ ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
ಕಳೆದ ಶುಕ್ರವಾರ ಇಲ್ಲಿನ ಕೆಎಸ್ ಬಿಎ ಹಾಲ್ ನಲ್ಲಿ ನಡೆದ ಪಂದ್ಯದಲ್ಲಿ ಬಿಲಿಯರ್ಡ್ಸ್ ನ ಹಳೆಯ ಹುಲಿ ಎಂದೇ ಖ್ಯಾತಿಯಾಗಿರುವ ಮಾಜಿ ವಿಶ್ವ ಚಾಂಪಿಯನ್ ಗೀತ ಸೇಥಿ ಅವರನ್ನು 6-1 ರಲ್ಲಿ ಪಾಯಿಂಟ್ ಫಾರ್ಮೆಟ್ ಮೂಲಕ ಗೆಲುವು ಸಾಧಿಸುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಆಗಿದ್ದ ಪಂಕಜ್, ಮಂಗಳವಾರ ನಡೆದ ಟೈಮ್ ಫಾರ್ಮೆಟ್ ಸೆಮಿಫೈನಲ್ ಪಂದ್ಯದಲ್ಲಿ ಮತ್ತೆ ಗೀತ್ ಸೇಥಿಯನ್ನು ಸೋಲಿಸಿ ಫೈನಲ್ ತಲುಪಿದರು.
ಪಂಕಜ್ ಅಡ್ವಾಣಿ ಸತತ ಮೂರು ಬಾರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2005 ಮತ್ತು 2007ರಲ್ಲಿ ರಲ್ಲಿ ಐಬಿಎಫ್ಎಸ್ ವಿಶ್ವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅವರ ಶ್ರೇಷ್ಠ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ 2005ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರಕೂಡ2007ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ದಶಕಗಳಿಂದ ತರಬೇತುದಾರ ಅರವಿಂದ ಸಾವೂರ್ ಅವರ ಕೈಯಲ್ಲಿ ಪಳಗಿರುವ 23ರ ಹರೆಯದ ಪಂಕಜ್, ಕಿರಿಯ ವಯಸ್ಸಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶ್ವ ಚಾಂಪಿಯನ್ ಪ್ರಶಸ್ತಿ ಅಲ್ಲದೇ, 2006ರಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಅನೇಕ ವರ್ಷಗಳ ಕಾಲ ಪಂಕಜ್ ಅಡ್ವಾಣಿ ಅವರು ಗೆಲುವು ಸಾಧಿಸುವ ಮೂಲಕ ಪಾರುಪತ್ಯ ಮೆರೆದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
