ಯುಎಸ್ ಓಪನ್ ಟೆನ್ನಿಸ್ : ಸೆರೆನಾಗೆ ಚಾಂಪಿಯನ್ ಶಿಪ್

Serena wins US Openನ್ಯೂಯಾರ್ಕ್, ಸೆ. 8 : ಅಮೆರಿಕದ ಸೆರೆನಾ ವಿಲಿಯಮ್ಸ್ ಮೂರನೇ ಬಾರಿಗೆ ಅಮೆರಿಕನ್ ಓಪನ್ ಟೆನ್ನಿಸ್ ಗ್ರಾನ್ ಸ್ಲಾಂ ಚಾಂಪಿಯನ್ ಪಟ್ಟ ಧರಿಸಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಸೆರ್ಬೀಯಾ ಎಲೆನಾ ಜಾಂಕೊವಿಕ್ ಅವರನ್ನು 6-4, 7-5 ಸೆಟ್ ಗಳಲ್ಲಿ ಸೋಲಿಸುವ ಮೂಲಕ ತವರಿನಲ್ಲಿ ಚಾಂಪಿಯನ್ನಾಗಿ ಸೆರೆನಾ ವಿಲಿಯಮ್ಸ್ ಹೊರಹೊಮ್ಮಿದ್ದಾರೆ.

2 ಗಂಟೆ ಗೂ ಅಧಿಕ ಹೊತ್ತಿನ ಹಣಾಹಣಿಯಲ್ಲಿ ಸೆರೆನಾ ವಿಲಿಯಮ್ಸ್ ಪ್ರತಿ ಸೆಟ್ ನಲ್ಲಿಯೂ ಮೇಲುಗೈ ಸಾಧಿಸುತ್ತಾ ಬಂದರು. ಒಂಬತ್ತನೇ ಕ್ರಮಾಂಕದ ಸರ್ಬೀಯಾದ ಜೆಲೆನಾ ಜಾಂಕೊವಿಕ್ ಅವರನ್ನು ನೇರ ಸೆಟ್ ಗಳಲ್ಲಿ ಮಣಿಸಿದ ಸೆರೆನಾ ವಿಜಯದ ನಗೆ ಬೀರಿದರು. ಈ ಮೂಲಕ ಸೆರೆನಾ ಮೂರನೇ ಬಾರಿಗೆ ಅಮೆರಿಕನ್ ಓಪನ್ ಟೆನ್ನಿಸ್ ಚಾಂಪಿಯನ್ ಪ್ರಶಸ್ತಿ ಪಡೆದು, ಎಲೆನಾ ಜಾಂಕೊವಿಕ್ ಅವರ ಕನಸನ್ನು ಭಗ್ನಗೊಳಿಸಿದರು.

ಪಂದ್ಯದಲ್ಲಿ ಜಯಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೆರೆನಾ, ಇದು ನನ್ನ ಜೀವನದ ಅತ್ಯಂತ ಸಂತಸ ದಿನದಲ್ಲಿ ಒಂದು ಎಂದರು. ಈ ಸಾಧನೆಯ ಹಿಂದೆ ಭಾರಿ ಪರಿಶ್ರಮವಿದೆ. ತವರಿನಲ್ಲಿ ಇನ್ನೊಂದು ಪ್ರಶಸ್ತಿ ಗಳಿಸಬೇಕು ಎನ್ನುವ ನನ್ನ ಹೆಬ್ಬಯಕೆ ಈಡೇರಿದೆ ಎಂದು ಸೆರೆನಾ ಹೇಳಿದರು. 1999 ರಲ್ಲಿ ಮಾರ್ಟಿನಾ ಹಿಂಗೀಸ್ ಹಾಗೂ 2002 ರಲ್ಲಿ ಸಹೋದರಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸುವ ಯುಎಸ್ ಒಪನ್ ಟೆನ್ನಿಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಫೆಡರರ್ ಗೆ ಯುಎಸ್ ಓಪನ್ ಗರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+