ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವೈಫಲ್ಯ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

By Staff
|
Google Oneindia Kannada News

ಬೆಂಗಳೂರು, ಸೆ. 8 : ರಾಜ್ಯದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ100 ದಿನದ ಆಡಳಿತ ವೈಪಲ್ಯವನ್ನು ವಿರೋಧಿಸಿ ಜನತಾ ದಳ (ಜಾತ್ಯಾತೀತ) ಪಕ್ಷ ರಾಜ್ಯಾದ್ಯಂತ ಇಂದು ಪ್ರತಿಭಟನೆ ಆರಂಭಿಸಿದೆ. ನಗರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಹಿಸಲಿದ್ದಾರೆ. ಪಕ್ಷದ ಕಚೇರಿಯಿಂದ ರಾಜಭವನದವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತರ ಹೆಸರಿನಲ್ಲಿ ಅಧಿಕಾರಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಕೆಲವೇ ದಿನದಲ್ಲಿ ನಡೆಸಿದ ರೈತರ ಮೇಲಿನ ಗೋಲಿಬಾರ್ ಪ್ರಕರಣ, ರಸಗೊಬ್ಬರ ವಿಳಂಬ, ಬರ ಪರಿಹಾರ ನೀಡದಿರುವುದು, ಪ್ರವಾಹ ಪೀಡಿತ ಪ್ರದೇಶಗಳ ನಿರ್ಲಕ್ಷ್ಯ, ವಿದ್ಯುತ್ ನೀತಿ ರೂಪಿಸದಿರುವುದು, ವರ್ಗಾವಣೆಯ ಅವಾಂತರ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಬರೀ ಭರವಸೆಗಳಾಗಿಯೇ ಉಳಿದಿವೆ ಎಂದು ಜೆಡಿಎಸ್ ಪಕ್ಷದ ಮುಖಂಡರು ಬಿಜೆಪಿ ಸರ್ಕಾರದ ವೈಫಲ್ಯದ ಪಟ್ಟಿ ಹಿಡಿದು ಇಂದು ಬೃಹತ್ ಪ್ರತಿಭಟನೆ ಇಳಿದಿದ್ದಾರೆ. "ನೂರು ದಿನ ಸಾವಿರ ಸುಳ್ಳು "ಘೋಷಣೆಗಳು ಸೇರಿದಂತೆ ಪ್ರತಿಭಟನೆ ಸೇರಿರುವ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಸರ್ಕಾರದ ವಿಫಲತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನೂರು ದಿನದ ಸೂತಕ ಸಂಭ್ರಮವನ್ನು ಯಡಿಯೂರಪ್ಪ ಸರ್ಕಾರ ಆಚರಿಸಿಕೊಳ್ಳುತ್ತಿದೆ. 100 ಸಂಖ್ಯೆಯಲ್ಲಿ ಮೊದಲಿನ ಸಂಖ್ಯೆಯಲ್ಲಿ ತೆಗೆದರೆ ಉಳಿಯುವ ಎರಡು ಶೂನ್ಯಗಳೇ ಈ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ಒಂದಿಲ್ಲೊಂದು ಸಮಸ್ಯೆಯನ್ನು ಹುಟ್ಟು ಹಾಕುತ್ತಿರುವ ಬಿಜೆಪಿ ಅವುಗಳ ಪರಿಹಾರಕ್ಕೆ ಮಾತ್ರ ಗಮನ ಹರಿಸಲೇ ಇಲ್ಲ. ಮಂತ್ರಿ ಮಂಡಲ ರಚನೆ ಬಿಜೆಪಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರಲ್ಲದೇ, ಇತರೆ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿದರು. ಈ ರೀತಿ ವರ್ತಿಸಬಾರದು ಎಂದು ಪಕ್ಷದ ಅಧ್ಯಕ್ಷ ಸದಾನಂದಗೌಡರಾಗಲಿ, ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಮನವಿ ಮಾಡಿಕೊಳ್ಳಲಿಲ್ಲ. ಈ ಮೂಲಕ ಬಿಜೆಪಿ ಆರಂಭದಿಂದಲೂ ಅನಾಗರಿಕ ವರ್ತನೆ ನಡೆಸುತ್ತಲೇ ಬಂದಿದೆ ಎಂದು ಅವರು ಕಿಡಿಕಾರಿದ್ದಾರೆ.

ಸೆ. 12 ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ. ಅಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಣಯಗಳನ್ನು ಗಮನಿಸಿ ಸೆ. 18 ರಂದು ನಗರದಲ್ಲಿ ಇನ್ನೊಂದು ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯ 28 ಜಿಲ್ಲೆಗಳಲ್ಲಿ ಜೆಡಿಎಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಬೀದರ್ ನಲ್ಲಿ ಪಕ್ಷದ ಅಧ್ಯಕ್ಷ ಮೆರಾಜುದ್ದೀನ್ ಪಟೇಲ್, ಕಡೂರಿನಲ್ಲಿ ವೈಎಸ್ ವಿ ದತ್ತ, ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ರೈತರ ಪರಿಹಾರಕ್ಕೆ ಒತ್ತಾಯಿಸಿ ಬೀದಿಗಿಳಿದ ರೇವಣ್ಣ
ಬಸ್ ದರ ಏರಿಕೆಗೆ ದೇವೇಗೌಡ ವಿರೋಧ
ಗೋಕರ್ಣ : ಹಸ್ತಾಂತರದ ಹುತ್ತಕ್ಕೆ ಕೈ ಹಾಕಿದ ದೇವೇಗೌಡ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X