ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.8ರಂದು ಛತ್ತೀಸ್ ಗಡದ ವಿದ್ಯುತ್ ಗೆ ಚಾಲನೆ

By Staff
|
Google Oneindia Kannada News

ಛತ್ತೀಸ್ ಗಢ, ಸೆ. 8 : ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಛತ್ತೀಸ್ ಗಢದ ರಾಯಪುರದಲ್ಲಿ 2600 ಮೆಗಾವ್ಯಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕದ ಒಪ್ಪಂದಕ್ಕೆ ಕರ್ನಾಟಕ ಸೋಮವಾರ ಸಹಿ ಹಾಕಲಿದೆ. ಎಸ್.ಎಸ್.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಪಾಪಿಸುವ ಕನಸು ಯಡಿಯೂರಪ್ಪ ಕಾಲದಲ್ಲಿ ನನಸಾಗುತ್ತಿದೆ.

2600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಕಲ್ಲಿದ್ದಲು ಇಂಧನ ಆಧಾರಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾಪನೆಗೆ ಇಂದು ಕರ್ನಾಟಕ ಹಾಗೂ ಛತ್ತೀಸ್ ಗಡದ ಇಬ್ಬರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಾಲನೆ ದೊರೆಯಲಿದೆ. ಎರಡು ರಾಜ್ಯಗಳ ವಿದ್ಯುತ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎರಡು ರಾಜ್ಯಗಳ ವಿದ್ಯುತ್ ನಿಗಮದ ಅಧಿಕಾರಿಗಳ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.

ಇದೇ ಮೊದಲ ಬಾರಿಗೆ ಕರ್ನಾಟಕ ಮತ್ತೊಂದು ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸುತ್ತಿದೆ. ಛತ್ತೀಸ್ ಗಢದಲ್ಲಿ 50 ಸಾವಿರ ಮೆಗಾವ್ಯಾಟ್ (50 ವರ್ಷಗಳಿಗಾಗುವಷ್ಟು)ಉತ್ಪಾದಿಸುವಷ್ಟು ಕಲ್ಲಿದ್ದಲು ನಿಕ್ಷೇಪವಿದೆ. ಆದರೆ ವಿದ್ಯುತ್ ಗೆ ಬೇಡಿಕೆ ಇಲ್ಲ. ಪ್ರಸ್ತುತ ಛತ್ತೀಸ್ ಗಡ ರಾಜ್ಯ ವಿದ್ಯುತ್ ಕೊರತೆ ಇಲ್ಲ. ಇಲ್ಲಿಯ ಜನರಿಗೆ ಉದ್ಯೋಗದ ಅವಶ್ಯಕತೆ ಇದೆ. ಇತರೆ ರಾಜ್ಯಗಳು ವಿದ್ಯುತ್ ಉತ್ಪಾದನೆಗಾಗಿ ಛತ್ತೀಸ್ ಗಡ ರಾಜ್ಯದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.

ಈ ನಿಟ್ಟನಲ್ಲಿ ವಿದ್ಯುತ್ ಯೋಜನೆ ಛತ್ತೀಸ್ ಗಢಕ್ಕೆ ಅನುಕೂಲಕರವಾಗಿದ್ದ್ದು ಕರ್ನಾಟಕಕ್ಕೂ ಲಾಭವಾಗಲಿದೆ. ಕಲ್ಲಿದ್ದಲು ಸಾಗಣೆ, ಪರಿಸರ ಮಾಲಿನ್ಯದ ಸಮಸ್ಯೆ ಇರುವುದಿಲ್ಲ. ಪ್ರತಿ ಟನ್ ಕಲ್ಲಿದ್ದಲು ಸಾಗಿಸಲು 2400 ರುಪಾಯಿ ಬೇಕು. ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆಯಲ್ಲಿ 1.80 ರು. ಕಲ್ಲಿದ್ದಲು ಸಾಗಾಣೆಗೆ ಹೋಗುತ್ತಿತ್ತು. ಅಲ್ಲದೇ ನಿಗದಿತ ಕಲ್ಲಿದ್ದಲು ಗಣಿಯನ್ನು ಪಡೆದರೆ ಶೇ. 5, ಬೇರೆ ಕಡೆಯಿಂದ ಕಲ್ಲಿದ್ದಲು ಪಡೆದರೆ ಶೇ 7.5 ವಿದ್ಯುತ್ ಛತ್ತೀಸ್ ಗಢ ರಾಜ್ಯಕ್ಕೆ ನಿಗದಿತ ದರದಲ್ಲಿ ನೀಡಬೇಕು. ಪ್ರತಿ ಯುನಿಟ್ ವಿದ್ಯುತ್ ದರ 2.44 ರು.ಗಳು, ಇದೇ ವಿದ್ಯುತ್ ಕರ್ನಾಟಕದಲ್ಲಿ ತಯಾರದರೆ ಪ್ರತಿ ಯುನಿಟ್ ಗೆ ಹೆಚ್ಚು ವರಿಯಾಗಿ 1.45 ರು.ಗಳು ಖರ್ಚಾಗುತ್ತಿತ್ತು ಎಂಬುದು ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆ ಹಿರಿಯ ಅಧಿಕಾರಿಗಳ ಅಂಬೋಣ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X