ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವಿರೋಧಿ ಸರ್ಕಾರಕ್ಕೆ ಪಾಠ ಕಲಿಸಿ : ಕುಮಾರಸ್ವಾಮಿ

By Staff
|
Google Oneindia Kannada News

ಬೆಂಗಳೂರು, ಸೆ. 8 : ಗ್ರಾಮೀಣ ಬಡ ಜನತೆ ಹಾಗೂ ರೈತರ ಹಿತ ಕಡೆಗಣಿಸಿರುವ ಸರ್ಕಾರ ಸಂಪೂರ್ಣ ಜನ ವಿರೋಧಿ ಆಡಳಿತ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ನೂರು ದಿನದಲ್ಲಿ 'ಆಪರೇಷನ್ ಕಮಲ' ಎಂಬ ಅತ್ಯದ್ಭುತ ಕಾರ್ಯಕ್ರಮವೇ ಬಿಜೆಪಿ ಸರ್ಕಾರ ಮಹೋನ್ನತ ಸಾಧನೆ ಎಂದು ಅವರು ಲೇವಡಿ ಮಾಡಿದರು.

ಬಿಜೆಪಿ ಪಕ್ಷದ ನೂರು ದಿನದ ಆಚರಿಸುವ ಮುನ್ನ ದಿನ ಸರ್ಕಾರದ ವೈಪಲ್ಯ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ದಿನದಲ್ಲಿ ಉತ್ತಮ ಆಡಳಿತ ನೀಡಿದ್ದೇವೆ ಎಂದು ಯಡಿಯೂರಪ್ಪ ಜನರನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು. ಬಿಜೆಪಿ ಪ್ರಣಾಳಿಕೆಯಲ್ಲಿನ ಎಲ್ಲ ಆಶ್ವಾಸನೆಗಳು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಯೋಜನೆಗಳೆ ಹೊರತು ಹೊಸ ಯೋಜನೆಗಳು ಅಲ್ಲ ಎಂದ ಕುಮಾರಸ್ವಾಮಿ, ಭಾಗ್ಯ ಲಕ್ಷ್ಮಿ ಯೋಜನೆ, ಸೈಕಲ್ ವಿತರಣೆ ಎಲ್ಲವೂ ನಾನು ಮುಖ್ಯಮಂತ್ರಿಯಿದ್ದಾಗ ಜಾರಿಗೆ ಬಂದಿರುವ ಯೋಜನೆಗಳು ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.

ರಾಜ್ಯದ ಅನೇಕ ಕಡೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಜಾಪೂರದಲ್ಲಿ ರೈತರ ಬೆಳದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ ಸುಮಾರು 500 ಕೋಟಿ ರುಪಾಯಿ ಹೆಚ್ಚು ನಷ್ಟವಾಗಿದೆ. ಇದರಿಂದ ರೈತರು ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಪಡಿತರ ಚೀಟಿ ಅವ್ಯವಸ್ಥೆಯ ಆಗರವಾಗಿದೆ. ಬಳ್ಳಾರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ ಮುಖಂಡರು ಅಕ್ರಮವಾಗಿ ಗಣಿ ದಂಧೆಯಲ್ಲಿ ತೊಡಗಿದ್ದಾರೆ ಟೀಕಿಸಿದರು. ವರ್ಗಾವಣೆಯಲ್ಲಿ ಸಂಪೂರ್ಣವಾಗಿ ಹಣ ಸಂಗ್ರಹವಾಗಿಲ್ಲ, ಅದರಿಂದ ಮುಖ್ಯಮಂತ್ರಿಯವರಿಗೆ ವರ್ಗಾವಣೆಯಲ್ಲಿ ಅಸಮಾಧಾನ ತಂದಿದೆ ಎನ್ನುತ್ತಿದ್ದಾರೆ ಎಂದು ಕಟುಕಿದ ಕುಮಾರಸ್ವಾಮಿ, ಹಣ ಸಂಗ್ರಹಕ್ಕಾಗಿ ಸರ್ಕಾರ ಏನು ಹೇಸುತ್ತಿಲ್ಲ ಎಂದು ಜರಿದರು.

ಕಳೆದ ನೂರು ದಿನದಲ್ಲಿ ಆಪರೇಶನ್ ಕಮಲ ಕಾರ್ಯಕ್ರಮ ಜಾರಿಯಲ್ಲಿತ್ತು. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 25 ಸಂಸದರನ್ನು ಆರಿಸಿ ಕಳಿಸುವ ಎಲ್. ಕೆ. ಅಡ್ವಾಣಿ ಅವರನ್ನು ಪ್ರಧಾನಮಂತ್ರಿ ಮಾಡುವ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ರಾಜ್ಯದ ಜನತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಜನಸಾಮಾನ್ಯನನ್ನು ನಿರ್ಲಕ್ಷಿಸಿದ್ದಾರೆ ಎಂದರು .

(ದಟ್ಸ್ ಕನ್ನಡ ವಾರ್ತೆ)

ಬಿಜೆಪಿ ವಿರುದ್ಧ ವಿಎಸ್. ಉಗ್ರಪ್ಪ ಟೀಕೆ
ಬಿಜೆಪಿ ವೈಫಲ್ಯ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X