ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಕ್ಕಲಿಗರ ಸಂಘದ ಚುನಾವಣೆ ಜೈಜಗದೀಶ್ ನಾಮಪತ್ರ

By Staff
|
Google Oneindia Kannada News

ಕೊಡಗು, ಸೆ. 5 : ಸೆ. 21 ರಂದು ಒಕ್ಕಲಿಗರ ಸಂಘಕ್ಕೆ ಚುನಾವಣೆಯ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅರಕಲಗೂಡು ಶಾಸಕ ಎ. ಮಂಜು ಅವರು ಕೊಡಗಿನ ನಿವಾಸಿಯಲ್ಲ ಎಂದು ಚಿತ್ರ ನಟ, ನಿರ್ಮಾಪಕ ಜೈಜಗದೀಶ್ ತಕರಾರು ತಗೆದ ಹಿನ್ನೆಲೆಯಲ್ಲಿ ಎ. ಮಂಜು ಅವರ ಬೆಂಬಲಿಗರ ಹಾಗೂ ಜೈಜಗದೀಶ್ ನಡುವೆ ಜಟಾಪಟಿ ನಡೆದ ಪ್ರಸಂಗ ಶುಕ್ರವಾರ ನಡೆದಿದೆ.

ರಾಜ್ಯದಲ್ಲಿ ಶ್ರೀಮಂತ ಎಂದೇ ಗುರುತಿಸಿಕೊಂಡಿರುವ ಒಕ್ಕಲಿಗರ ಸಂಘಟದ ಚುನಾವಣೆ ಇದೇ ಸೆ. 21 ನಡೆಯಲಿದೆ. ಕೊಡಗು ಜಿಲ್ಲೆಯಿಂದ ಕಳೆದ ಮೂವರು ಅವಧಿಗೆ ಸಂಘದ ನಿರ್ದೇಶಕ ಸೇವೆ ಸಲ್ಲಿಸಿದ ಅಕರಲಗೂಡು ಶಾಸಕ ಎ. ಮಂಜು ಕೊಡಗು ಜಿಲ್ಲೆಯವರಲ್ಲ. ಕೊಡಗು ನಿವಾಸಗಳಿಗೆ ನೀಡಬೇಕಿರುವ ಸ್ಥಾನವನ್ನು ಬೇರೆ ಜಿಲ್ಲೆಯವರು ಪಡೆಯುತ್ತಿದ್ದಾರೆ ಎನ್ನುವುದು ಜೈಜಗದೀಶ್ ಅವರ ಪ್ರಮುಖ ಆರೋಪವಾಗಿದೆ.

ಮಂಜು ಅವರು ಜಿಲ್ಲೆಯ ಸೋಮವಾರ ಪೇಟೆಯ ನಗರೂರು ಗ್ರಾಮದ ನಿವಾಸಿ ಎಂದು ಸುಳ್ಳು ವಿಳಾಸ ನೀಡಿ ಸತತ ಹತ್ತು ವರ್ಷಗಳ ಕಾಲ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮಂಜು ಅವರ ಕ್ರಮ ಸಂಪೂರ್ಣ ಕಾನೂನು ವಿರೋಧವಾಗಿದೆ. ಮಂಜು ನೀಡಿರುವ ವಿಳಾಸ ಶುದ್ಧ ಸುಳ್ಳು ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಮುಖ್ಯವಾಗಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಹೀಗಿದ್ದೂ ಕೂಡ ಕೊಡಗಿನಿಂದ ಒಕ್ಕಗಲಿಗರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗುತ್ತಿರುವುದು ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಜೈಜಗದೀಶ್ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಆದರೆ ಜೈಜಗದೀಶ್ ಅವರ ಮನವಿಯನ್ನು ತಿರಸ್ಕರಿಸಿದ ಚುನಾವಣಾಧಿಕಾರಿಗಳು ಮಂಜು ಅವರ ನಾಮಪತ್ರ ಅಂಗೀಕಾರ ಮಾಡಿಕೊಂಡಿದ್ದಾರೆ. ಈ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಜೈಜಗದೀಶ್ ತಿಳಿಸಿದ್ದಾರೆ.

ಒಕ್ಕಲಿಗರ ಜನ ಸಂಖ್ಯೆ ಆಧಾರದ ಮೇಲೆ ಜಿಲ್ಲೆಗಳಿಗೆ ಸ್ಥಾನವನ್ನು ಹಂಚಲಾಗುತ್ತಿದೆ. ಕೊಡಗು ಜಿಲ್ಲೆಗೆ ಒಂದು ಸ್ಥಾನ ಮಾತ್ರ ಲಭ್ಯವಿದ್ದು, ಆ ಸ್ಥಾನವನ್ನು ಅರಕಲಗೂಡು ಶಾಸಕ ಎ.ಮಂಜು ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಅರಕಲಗೂಡು ಶಾಸಕ ಎ.ಮಂಜು, ತಮ್ಮಣ್ಣಗೌಡ, ಜೈಜಗದೀಶ್ ಹಾಗೂ ಚಂದ್ರಕಲಾ ಎನ್ನುವವರು ನಾಮಪತ್ರ ಸಲ್ಲಿಸಿದ್ದಾರೆ. ಸೆ. 21 ರಂದು ಮತದಾನ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)
ಆನೆ ಸೃಷ್ಟಿಸಿದ ಗೊಂದಲ; ಕೆಳಕ್ಕುರುಳಿದ ಜೈಜಗದೀಶ್‌!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X