ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

By Staff
|
Google Oneindia Kannada News

ಬೆಂಗಳೂರು, ಆ.30: ಏಕಾಏಕಿ ಬಸ್ ದರ ಏರಿಕೆ ಮಾಡಿರು ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ ಸೆ. 2 ರಂದು ರಾಜ್ಯದಾದ್ಯಂತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬೆಲೆ ಏರಿಕೆ ಮಾಡುವುದಕ್ಕು ಒಂದು ಮಿತಿಯಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ದರವನ್ನು ಶೇ.12 ರ ವರೆಗೂ ಹೆಚ್ಚು ಮಾಡಿರುವ ಕ್ರಮ ಸರಿಯಿಲ್ಲ. ಜನಸಾಮಾನ್ಯರ ಮೇಲೆ ಈ ರೀತಿಯ ಹೊರೆ ಹೇರುವುದು ಯಾವ ರೀತಿಯಿಂದಲೂ ಸರಿಯಿಲ್ಲ ಎಂದುಖರ್ಗೆ ಗುಡುಗಿದರು.

ಗೋಕರ್ಣ ದೇಗುಲ ಹಸ್ತಾಂತರ ವಿವಾದದ ಬಗ್ಗೆ ಪ್ರಶ್ನಿಸಿದಾಗ, ಕೋಪಗೊಂಡ ಖರ್ಗೆ ಅವರು, ಅದು ಜನವಿರೋಧಿ ಕ್ರಮ, ಸರ್ಕಾರ ಮಠಾಧಿಪತಿಗಳ ಅಡಿಯಾಳಾಗುತ್ತಿರುವುದು ಶೋಚನೀಯ ಎಂದು ಉತ್ತರಿಸಿದರು.

(ದಟ್ಸ್ ಕನ್ನಡವಾರ್ತೆ)

ಪೂರಕ ಓದಿಗೆ:

ಬಸ್ ದರ ಏರಿಕೆಗೆ ದೇವೇಗೌಡ ವಿರೋಧ
ಬಸ್ ದರ ಹೆಚ್ಚಳಕ್ಕೆ ಜಗ್ಗೇಶ್ ಸಮರ್ಥನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X