ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಸ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಖಂಡನೆ

By Staff
|
Google Oneindia Kannada News

ಬೆಂಗಳೂರು, ಆ. 29 : ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಏಕಾಏಕಿ ಬಸ್ ದರವನ್ನು ಹೆಚ್ಚಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜನವಿರೋಧಿಯಾಗಿರುವ ಬಸ್ ದರ ಏರಿಕೆಯ ನಿರ್ಧಾರವನ್ನು ಕೈಗೊಂಡಿರುವ ಬಿಜೆಪಿ ಸರ್ಕಾರದ ಕ್ರಮದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಹಿತವನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ರಾಜ್ಯ ಸರ್ಕಾರ ಬಸ್ ಏರಿಸುವುದಕ್ಕೆ ಸಕಾಲಿಕ ಕಾರಣ ನೀಡಬೇಕು ಎಂದು ಆಗ್ರಹಿಸಿದ ಉಗ್ರಪ್ಪ, ಮುಖ್ಯಮಂತ್ರಿಯವರು ವಿದೇಶಿ ಪ್ರವಾಸದಲ್ಲಿರುವಾಗ ಬಸ್ ಪ್ರಯಾಣ ದರ ಹೆಚ್ಚುಸುವ ಮರ್ಮವಾದರೂ ಏನಿದೆ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಈ ಕೂಡಲೇ ಪ್ರಯಾಣ ದರ ಏರಿಕೆ ಸ್ಪಷ್ಟವಾದ ಕಾರಣ ನೀಡಬೇಕು ಎಂದು ಸರ್ಕಾರಕ್ಕೆ ಅವರು ತಾಕೀತು ಮಾಡಿದ್ದಾರೆ.

ರಾಜ್ಯದ ಕೆಲವಡೆ ಅತಿವೃಷ್ಠಿಯುಂಟಾಗಿದೆ. ಇನ್ನೂ ಕೆಲ ಕಡೆಗೆ ಬರಗಾಲದ ಛಾಯೆ ಆವರಿಸಿದೆ. ಹಣದುಬ್ಬರ ಜನರನ್ನು ಭೂತದಂತೆ ಕಾಡತೊಡಗಿದೆ. ಇಷ್ಟೆಲ್ಲಾ ಸಮಸ್ಯೆಗಳಿವೆ. ಅದನ್ನು ನಿವಾರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಅದನ್ನು ಸಂಕಷ್ಟದಲ್ಲಿರುವ ಜನರ ಹಿತಾಸಕ್ತಿ ಕಡೆಗಣಿಸಿ ಬಸ್ ದರ ಏರಿಕೆ ಮಾಡಿ ಬರೆ ಹಾಕಿರುವ ಕ್ರಮ ಜನವಿರೋಧಿ ಎಂದು ಕಿಡಿಕಾರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಬಸ್ ದರ ಹೆಚ್ಚಳಕ್ಕೆ ಜಗ್ಗೇಶ್ ಸಮರ್ಥನೆ
ಬಿಎಂಟಿಸಿ, ಕೆಎಸ್ ಆರ್ ಟಿಸಿಬಸ್ ದರದಲ್ಲಿ ಏರಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X