ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐಗೆ ವಾಪಸ್ಸಾಗಲಿರುವ ನಕಲಿ ನೋಟುಗಳು

By Staff
|
Google Oneindia Kannada News

ನವದೆಹಲಿ, ಆ.28: ದೇಶದಲ್ಲಿ ಸಾವಿರಾರು ಕೋಟಿಯ ನಕಲಿ ನೋಟುಗಳು ಚಲಾವಣೆಯಲ್ಲಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 1996 ಮತ್ತು 2000ನೇ ವರ್ಷದ ನೋಟುಗಳನ್ನು ವಾಪಸ್ಸು ಪಡೆಯುವುದಾಗಿ ಗುರುವಾರ ಪ್ರಕಟಿಸಿದೆ.

10,20,50 ಮತ್ತು 100 ರು.ಮುಖಬೆಲೆಯ ನೋಟುಗಳನ್ನು ಜನವರಿ 2009ರ ಒಳಗೆ ಹಿಂಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಬಹುಕೋಟಿ ನಕಲಿ ನೋಟಿನ ಹಗರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ. 1996 ಮತ್ತು 2000ನೇ ವರ್ಷದಲ್ಲಿ ನಕಲಿ ನೋಟುಗಳು ಹೇರಳವಾಗಿ ಚಲಾವಣೆಯಾಗಿವೆ. ಹಾಗೆಯೇ 2005ನೇ ವರ್ಷದಲ್ಲಿ ಮುದ್ರಣವಾದ ನೋಟುಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಆರ್‍ಬಿಐ ತನ್ನ ಪ್ರಕಣೆಯಲ್ಲಿ ತಿಳಿಸಿದೆ.

ಮುಂದಿನ ಹೊಸ ಕ್ರಮಾಂಕದ ನೋಟುಗಳನ್ನು ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಹೊರತರಲು ಅರ್‌ಬಿಐ ಉದ್ದೇಶಿಸಿದೆ. ಹಾಗೆಯೇ 1996ನೇ ವರ್ಷದ 1000 ಮತ್ತು 500 ರು.ಗಳ ನೋಟುಗಳನ್ನು ಹಿಂದಕ್ಕೆ ಪಡೆದುಕೊಂಡು ಮತ್ತಷ್ಟು ಹೊಸ ಸುರಕ್ಷತಾ ವೈಶಿಷ್ಟ್ಯಗಳುಳ್ಳ ನೋಟುಗಳನ್ನು ನೀಡುವುದಾಗಿ ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲಾ ಹೇಳಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X