ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ್ ಪ್ರವಾಹ : ಪಿಎಂ, ಸೋನಿಯಾ ವೈಮಾನಿಕ ಸಮೀಕ್ಷೆ

By Staff
|
Google Oneindia Kannada News

ಪಾಟ್ನಾ, ಆ. 28 : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯತ್ತಿರುವ ವರುಣನ ಅರ್ಭಟಕ್ಕೆ ರೋಸಿ ಹೋಗಿರುವ ಕೋಸಿ ನದಿಯ ಪ್ರವಾಹದಿಂದ ರಾಜ್ಯ ಬಹುಭಾಗ ಪ್ರವಾಹದ ಸ್ಥಿತಿ ಎದುರಿಸುವಂತಾಗಿದೆ. ಸಾವಿರಾರು ಜನರು ವಸತಿ ಹೀನರಾಗಿದ್ದಾರೆ. ಲಕ್ಷಾಂತರ ಎಕರೆ ಪ್ರದೇಶ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಕೋಟ್ಯಂತರ ರುಪಾಯಿ ನಷ್ಟವಾಗಿದೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಸಂತ್ರಸ್ಥರ ಜನರನ್ನು ಭೇಟಿ ಮಾಡಲಿದ್ದಾರೆ. ರಾಜ್ಯದ ಇಂಡೋ ನೇಪಾಳ ಗಡಿಯಲ್ಲಿರುವ ನೂರಾರು ಗ್ರಾಮಗಳು ನೀರಿನಿಂದ ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ವೈಮಾನಿಕ ಸಮೀಕ್ಷೆ ನಂತರ,

ಮುಖ್ಯಮಂತ್ರಿ ನೀತೀಶ್ ಕುಮಾರ್ ಮಾತನಾಡಿ, ಕೋಸಿ ನದಿಯ ಪ್ರವಾಹದಿಂದ ಸಾವಿರಾರು ಜನರು ವಸತಿ ಹೀನರಾಗಿದ್ದಾರೆ. ನಿತ್ಯ ಜೀವನಕ್ಕೆ ಸಂಚಕಾರವುಂಟಾಗಿದೆ ಸೂರು ಕಳೆದಕೊಂಡು ಸಂತ್ರಸ್ಥರಾಗಿರುವ ಸಾವಿರಾರು ಜನರಿಗೆ ತಾತ್ಕಾಲಿಕ ಶೆಡ್ ರೂಪಿಸಲಾಗಿದೆ. ಪಾಕೆಟ್ ಮೂಲಕ ಸಂತ್ರಸ್ಥರಿಗೆ ಆಹಾರ ಮತ್ತು ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಂಚಾರಿ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪರಿಹಾರ ಕಾರ್ಯ ಭರದಿಂದ ಸಾಗಿದೆ ಎಂದು ವಿವರಿಸಿದರು. ವರುಣನ ರುದ್ರ ನರ್ತನಕ್ಕೆ 55 ಮಂದಿ ಮೃತಪಟ್ಟಿದ್ದಾರೆ. 1993 ರಲ್ಲಿ ಕೋಸಿ ನದಿ ಪ್ರವಾಹ ಉಕ್ಕಿ ಕೋಟ್ಯಂತರ ರುಪಾಯಿ ಹಾನಿಯುಂಟಾಗಿತ್ತು. ಸಾವಿರಾರು ಜನರು ಶೂರು ಕಳೆದುಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X