ಬುಧವಾರ ಪಿಯುಪೂರಕ ಪರೀಕ್ಷೆ ಫಲಿತಾಂಶ
ಬೆಂಗಳೂರು, ಆ. 27: ಕಳೆದ ಜೂನ್ ಹಾಗೂ ಜುಲೈ ನಲ್ಲಿ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಯ ಮರು ಮೌಲ್ಯಮಾಪನ ಫಲಿತಾಂಶ ಬುಧವಾರ ಮಧ್ಯಾಹ್ನ ಪ್ರಕಟವಾಗಲಿದೆ.
ಇಂದು ಮಧ್ಯಾಹ್ನ 2 ಗಂಟೆ ನಂತರ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಜಿ. ಹೆಗಡೆ ತಿಳಿಸಿದ್ದಾರೆ.
ವೆಬ್ ಸೈಟ್ ವಿಳಾಸ: http://www.pue.kar.nic.in
(ದಟ್ಸ್ ಕನ್ನಡವಾರ್ತೆ)












Click it and Unblock the Notifications