ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿಬಿಟಿಗೆ ಸಹಿ ಹಾಕಲು ಭಾರತಕ್ಕೆ ಒತ್ತಾಯ

By Staff
|
Google Oneindia Kannada News

ವಿಯನ್ನಾ, ಆ. 22 : ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮಹತ್ವದ ಘಟ್ಟದಲ್ಲಿ ಬಂದು ನಿಂತಿದ್ದು, ಗುರುವಾರ ಇಲ್ಲಿ ನಡೆದ ಪರಮಾಣು ಸರಬರಾಜು ರಾಷ್ಟ್ರಗಳು(ಎನ್ಎಸ್ ಜಿ) ಸಭೆಯಲ್ಲಿ ಭಾರತ ಪರಮಾಣು ಸದಸ್ಯ ರಾಷ್ಟ್ರವಾಗಲು ಅಭ್ಯಂತರವೇನೂ ಇಲ್ಲ. ಆದರೆ ಎನ್ಎಸ್ ಜಿ ನಿಯಮದಂತೆ ಸಿಟಿಬಿಟಿ (Comprehensive Nuclear Test Ban Treaty), ಮತ್ತು ಎನ್ ಪಿಟಿ(Nuclear Proliferation Treaty) ಕಾಯ್ದೆಗೆ ಬದ್ಧನಾಗಿರುವೆ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುವುದು ಅಗತ್ಯವಾಗಿದೆ ಎನ್ನುವುದು ಎನ್ಎಸ್ ಜಿ ರಾಷ್ಟ್ರಗಳ ಒಕ್ಕೊರಲ ಅಭಿಪ್ರಾಯವಾಗಿದೆ.

ಕಾನೂನು ಎಲ್ಲರಿಗೂ ಸರಿಸಮಾನ. ಎನ್ಎಸ್ ಜಿ ಸದಸ್ಯರಾಗಿರುವ 45 ದೇಶಗಳೂ ಎನ್ ಪಿಟಿ ಹಾಗೂ ಸಿಟಿಬಿಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಸದಸ್ಯ ರಾಷ್ಟ್ರವಾಗಲು ಈ ಎರಡು ಕಾಯ್ದೆಗೂ ಸಹಿ ಹಾಕುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಒಂದು ಉಳಿದವರಿಗೆ ಇನ್ನೊಂದು ನಿಯಮ ಎಂಬ ತಾರತಮ್ಯ ನೀತಿಯನ್ನು ಅನುಸರಿಸುವುದು ಬೇಡ. ಆದ್ದರಿಂದ ಭಾರತ ಎನ್ಎಸ್ ಜಿ ಸದಸ್ಯ ರಾಷ್ಟ್ರವೆಂಬ ಗೌರವ ಪಡೆಯಲು ಅನಿವಾರ್ಯವಾಗಿ ಈ ಷರತ್ತಿಗೆ ಮಣಿಯಬೇಕಾಗಿದೆ ಎನ್ನುವ ಮಾತು ಸಭೆಯಲ್ಲಿ ವ್ಯಕ್ತವಾಗಿದೆ.

ನ್ಯೂಜಿಲ್ಯಾಂಡ್, ಆಸ್ಟ್ರೀಯಾ, ಸ್ವಿಜರ್ ಲ್ಯಾಂಡ್, ಹಂಗರಿ ದೇಶಗಳು ಭಾರತವು ಎನ್ ಪಿಟಿ ಮತ್ತು ಸಿಟಿಬಿಟಿಗೆ ಸಹಿ ಹಾಕಬೇಕು ಎಂದು ಪಟ್ಟುಹಿಡಿದಿವೆ. ಸಹಿ ಹಾಕದೇ ಒಪ್ಪಂದಕ್ಕೆ ಹಸಿರು ನಿಶಾನೆ ತೋರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಭಾರತ ಎನ್ಎಸ್ ಜಿ ಒತ್ತಡಕ್ಕೆ ಮಣಿಯುದೇ ಎನ್ನುವುದು ಕುತೂಹಲ ಪ್ರಶ್ನೆಯಾಗಿದೆ.

ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಿವಶಂಕರ ಮೆನನ್, ಪ್ರಧಾನಮಂತ್ರಿ ಆಪ್ತರಾದ ಶ್ಯಾಮ್ ಶರಣ್, ಭಾರತ ಅಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಒಳಗೊಂಡ ಭಾರತದ ನಿಯೋಗ ವಿಯನ್ನಾ ಭಾರಿ ಲಾಬಿಯಲ್ಲಿ ತೊಡಗಿದೆ. ಶಿವಶಂಕರ ಮೆನನ್ ಗುರುವಾರ ಸಭೆ ಮುಂದೆ ತಮ್ಮ ಬೇಡಿಕೆಯನ್ನು ಸಭೆ ಮುಂದಿಟ್ಟಿದ್ದು, ಸಭೆ ಸಹಮತ ಮತ ಸೂಚಿಸಿದೆ. ಎನ್ ಪಿಟಿ ಹಾಗೂ ಸಿಟಿಬಿಟಿ ಕಾಯ್ದೆಗೆ ಸಹಿಗೆ ಪಟ್ಟು ಹಿಡಿದಿದ್ದರಿಂದ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಅತ್ತ ಅಮೆರಿಕ ಎನ್ ಎಸ್ ಜಿ ರಾಷ್ಟ್ರಗಳ ಮೇಲೆ ಭಾರಿ ಒತ್ತಡ ತಂದಿದೆ. ಈ ಎಲ್ಲ ಪ್ರಯತ್ನಗಳ ನಡುವೆ ಇಂದು ಎನ್ಎಸ್ ಜಿ ಸಭೆ ಸಮ್ಮತಿಸುವ ಸಾಧ್ಯತೆ ಇದೆ ಎನ್ನವಾಗಿದೆ. ಎನ್ಎಸ್ ಜಿ ಸಮ್ಮತಿಸಿದರೆ ಸೆಪ್ಟಂಬರ್ ತಿಂಗಳಲ್ಲಿ ಅಮೆರಿಕನ್ ಕಾಂಗ್ರೆಸ್ ಮುಂದೆ ಒಪ್ಪಂದ ಬರಲಿದೆ.

(ದಟ್ಸ್ ಕನ್ನಡ ವಾರ್ತೆ)
ಪರಮಾಣು ಒಪ್ಪಂದದ ಅಗ್ನಿ ಪರೀಕ್ಷೆ ಇಂದು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X