ಶೇ.30ರವರೆಗೆ ರಿಯಾಯಿತಿಯಲ್ಲಿ ಕನ್ನಡ ಪುಸ್ತಕಗಳು
ಬೆಂಗಳೂರು,ಆ.22: ರಾಜ್ಯ ಸರ್ಕಾರದ ಎಲ್ಲ ಅಕಾಡೆಮಿಗಳು ಮತ್ತು ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಎಲ್ಲ ಪುಸ್ತಕಗಳು ಇನ್ನು ಮುಂದೆ ಒಂದೇ ಸೂರಿನಡಿ ಲಭ್ಯವಾಗಲಿವೆ.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಸಂಸ ಬಯಲು ರಂಗ ಮಂದಿರದ ಬಳಿ ಸಿರಿಗನ್ನಡ ಪುಸ್ತಕ ಮಳಿಗೆಯನ್ನು ಗುರುವಾರ ಆರಂಭಿಸಿತು. ವಿಶೇಷ ರಿಯಾಯಿತಿಯೊಂದಿಗೆ ಕಲೆ, ಸಾಹಿತ್ಯ ಹಾಗೂ ವಿವಿಧ ಪ್ರಕಾರಗಳ ಪುಸ್ತಕಗಳು ಸಾರ್ವಜನಿಕರಿಗೆ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ.
ಪುಸ್ತಕ ಮಳಿಗೆಯು ಮಧ್ಯಾಹ್ನ 12 ರಿಂದ ಸಂಜೆ 7ರವರೆಗೂ ತೆರೆದಿರುತ್ತದೆ. ಇಲ್ಲಿ ಪುಸ್ತಕ ಪ್ರಾಧಿಕಾರದ 225, ಕನ್ನಡ ಸಂಸ್ಕೃತಿ ಇಲಾಖೆಯ 200, ಎಂಟು ಅಕಾಡೆಮಿ ಪ್ರಕಾಟಣೆಯ 491 ಪುಸ್ತಕಗಳು ಸೇರಿ ಒಟ್ಟು 916 ಪುಸ್ತಕಗಳು ಲಭ್ಯವಾಗಲಿವೆ. ಎಲ್ಲ ಪುಸ್ತಕಗಳಿಗೂ ಶೇ.20ರಷ್ಟು ರಿಯಾಯಿತಿಯನ್ನು ಪ್ರಕಟಿಸಲಾಗಿದ್ದು, 1000 ರು.ಗಳಿಗೂ ಹೆಚ್ಚಿಗೆ ಖರೀದಿಸಿದರೆ ಶೇ.30ರಷ್ಟು ರಿಯಾಯಿತಿ ಲಭಿಸಲಿದೆ. ಪ್ರತಿ ಮಂಗಳವಾರ ಪುಸ್ತಕ ಮಳಿಗೆಗೆ ರಜೆ ಇರುತ್ತದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications