ಕಾರ್ಡಿಯೊಲಾಜಿಕಲ್ ಸೊಸೈಟಿಗೆ ರಜತೋತ್ಸವ
ಬೆಂಗಳೂರು,ಆ.22: ಬೆಂಗಳೂರು ವಿಭಾಗದ ಕಾರ್ಡಿಯೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಆ.23ರಂದು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ರಜತ ಮಹೋತ್ಸವ ಸಮಾರಂಭದ ನಿಮಿತ್ತ 'ಆರೋಗ್ಯಕರ ಹೃದಯಕ್ಕಾಗಿ ಆರೋಗ್ಯಕರ ಹವ್ಯಾಸಗಳು' ಎಂಬ ಕಾರ್ಯಕ್ರಮದಡಿ ವಸ್ತು ಪ್ರದರ್ಶನ,ಚಿತ್ರ ಪ್ರದರ್ಶನ ಹಾಗೂ ಹೃದಯ ತಪಾಸಣೆಯನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಣಿ ಸತೀಸ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಯ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ನಡೆಯಲಿದೆ.
ಕಾರ್ಯಕ್ರಕ್ಕೆ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಮತ್ತು ಕೇರಳ ಮಾಜಿ ನ್ಯಾಯಾಧೀಶರಾದ ಡಾ.ಜಸ್ಟೀಸ್ ವಿ.ಎಸ್.ಮಳಿಮಠ್ ಹಾಗೂ ವೈದ್ಯಕೀಯ ಸಚಿವ ರಾಮಚಂದ್ರ ಗೌಡ ಆಗಮಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
Cardiological Society of India
Bengaluru Chapter
#40,4th Floor,
Lakshmi Vilas Chambers (opp. Vani Vilas Hospital),
KR Road, Bengaluru-560 002
ದೂರವಾಣಿ ಸಂಖ್ಯೆ: 2670 4483
(ದಟ್ಸ್‌ಕನ್ನಡ ಸಭೆ-ಸಮಾರಂಭ)












Click it and Unblock the Notifications