ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್: ಕಂಚಿಗೆ ತೃಪ್ತಿಪಟ್ಟ ಬಾಕ್ಸರ್ ವಿಜೇಂದರ್

By Staff
|
Google Oneindia Kannada News

ಬೀಜಿಂಗ್, ಆ. 22 : ಬಾಕ್ಸಿಂಗ್ ಪಟು ವಿಜೇಂದರ್ ಕುಮಾರ್ 75 ಕೆಜಿ ಮಿಡ್ಲ್ ವೇಟ್ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್ ಹಣಾಹಣಿಯಲ್ಲಿ ಕ್ಯೂಬಾದ ಎಮಿಲಿಯೋ ಕೊರ್ರಿಯಾ ಬೈಯೆಕ್ಸ್ ಅವರ ವಿರುದ್ಧ ಸೋಲನುಭಿಸುವದರೊಂದಿಗೆ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಹರ್ಯಾಣದ ರಕ್ಷಣಾತ್ಮಕ ಶೈಲಿಯ ಅಕ್ರಮಣಕಾರಿ ಆಟಗಾರ ವಿಜೇಂದರ್ ಅವರನ್ನು ಕ್ಯೂಬಾ ಎಮಿಲಿಯೋ ಪ್ರತಿ ಹಂತದಲ್ಲಿ ಮೇಲೆಳಲು ಬಿಡಲೇ ಇಲ್ಲ. ಅಗತ್ಯ ಬಿದ್ದಾಗ ಭಾರತೀಯ ಆಟಗಾರನ ಮೇಲೆ ಎರಗಿದ ಅವರು, ಉತ್ತಮ ಪಂಚ್ ನೀಡುವ ಮೂಲಕ ವಿಜೇಂದರನ್ ನ್ನು ನೆಲಕ್ಕುರಿಳಿಸಿದರು.ಹಾಗಾಗಿ ವಿಜೇಂದರ್ ಫೈನಲ್ ತಲುಪಬೇಕೆಂಬ ಶತಕೋಟಿ ಭಾರತೀಯರು ಹಾರೈಕೆ ನುಚ್ಚುನೂರಾಗಿದೆ. ಅಭಿನವ್ ಬಿಂದ್ರಾ ನಂತರ ಭಾರತಕ್ಕೆ ಇನ್ನೊಂದು ಚಿನ್ನ ಪದಕ ದೊರೆಯಲಿದೆ ಎಂಬ ಭಾರತದ ಕನಸು ಕನಸಾಗಿಯೇ ಉಳಿಯಿತು.

ಪ್ರಥಮ ಸುತ್ತಿನಲ್ಲಿ 0-2 ರಿಂದ ಹಿನ್ನಡೆ ಅನುಭವಿಸದ ವಿಜೇಂದರ್ ಭಾರತೀಯ ಕ್ರೀಡಾಪ್ರೇಮಿಗಳಿಗೆ ನಿರಾಶೆ ಮೂಡಿಸಿದ್ದರು. ನಂತರ ಎರಡನೇ ಸುತ್ತಿನಲ್ಲಿ ಚೇತರಿಸಿಕೊಂಡು ಪರಿಮಾಣಕಾರಿ ದಾಳಿ ನಡೆಸುವ ಮೂಲಕ 4-3 ಅಂಕ ಗಳಿಸಿದರು. ಮೂರನೇ ಸುತ್ತಿನಲ್ಲಿ ಉತ್ತಮ ಪಂಚ್ ನೀಡುವ ಅವಕಾಶ ಸಿಕ್ಕದ್ದನ್ನು ವಿಜೇಂದರ್ ಕೈಯಾರೆ ಕಳೆದುಕೊಳ್ಳುವ ಮೂಲಕ 7-3 ರ ಅಂಕದಲ್ಲಿ ಹಿನ್ನಡೆ ಅನುಭವಿಸಿದರು. ನಾಲ್ಕನೇ ಸುತ್ತಿನಲ್ಲಿ ಭಾರತೀಯ ಆಟಗಾರನ ಮೇಲೆ ದಾಳಿ ನಡೆಸಿದ ಎಮಿಲಿಯೋ ಉತ್ತಮ ಹೊಡೆತಗಳ ಮೂಲಕ ವಿಜೇಂದರ್ ಕಂಗಾಲಾಗುವಂತೆ ಮಾಡಿದರು. ಈ ಮೂಲಕ 8-3 ರಿಂದ ವಿಜೇಂದರ್ ಹಿಂದುಳಿದರು. ಇನ್ನು ಕೊನೆಯ ಸುತ್ತಿನಲ್ಲಿ ಅಂಕಗಳಲ್ಲಿ ಮುಂದಿದ್ದ ಕ್ಯೂಬಾದ ಆಟಗಾರ ಅತ್ಯತ್ತಮ ಪಂಚ್ ಮೂಲಕ ಭಾರತೀಯ ಆಟಗಾರನನ್ನು ಸೋಲಿಸಿ ಫೈನಲ್ ತಲುಪಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಸೆಮಿಫೈನಲ್ : ವಿಜೇಂದರ್ ಗೆ ಅಗ್ನಿಪರೀಕ್ಷೆ
ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಆಸೆ ಜೀವಂತ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ಸೋತ ಜಿತೇಂದರ್
ಸೋತು ಗೆದ್ದ ಅದೃಷ್ಟವಂತ ಕುಸ್ತಿಪಟು ಸುಶೀಲ್
ಒಲಿಂಪಿಕ್ಸ್ :ಭಾರತದ ಕುಸ್ತಿಪಟು ಸುಶೀಲ್ ಗೆ ಕಂಚು
ಒಲಿಂಪಿಕ್ಸ್ :ಕುಸ್ತಿಪಟು ರಾಜೀವ್ ತೊಮರ್ ಗೆ ಸೋಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X