ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಾಖಲೆ ಸ್ಥಾಪಿಸಿದ ಜಮೈಕಾದ ಉಸೇನ್ ಬೋಲ್ಟ್

By Staff
|
Google Oneindia Kannada News

Usain boltಜಮೈಕಾ, ಆ. 21 : ಇಪ್ಪತ್ತೆರಡರ ಹರೆಯದ ಜಮೈಕಾ ಓಟಗಾರ ಉಸೇನ್ ಬೋಲ್ಟ್ ಅವರು ಬೀಜಿಂಗ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ನೂತನ ವಿಶ್ವ ದಾಖಲೆ ಸ್ಥಾಪಿಸುವ ಮೂಲಕ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟಗಳ 108 ವರ್ಷಗಳ ಇತಿಹಾಸದಲ್ಲಿದ್ದ ಎಲ್ಲ ದಾಖಲೆಗಳನ್ನು ಮುರಿದಿರುವ ಬೋಲ್ಟ್ 200 ಮೀ ಓಟದ ಸ್ಪರ್ಧೆಯಲ್ಲಿ ಕೇವಲ 19.30 ಸೆಕಂಡ್ ಗಳಲ್ಲಿ ಗುರಿ ಮುಟ್ಟುವ ಮೂಲಕ ವಿಶ್ವದಾಖಲೆಯನ್ನು ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಳೆದ ಅನೇಕ ದಿನಗಳಿಂದ ಅಮೆರಿಕದ ಮೈಕಲ್ ಜಾನ್ಸನ್ ಅವರ ಹೆಸರಿನಲ್ಲಿದ್ದ 19.32 ಸೆಕೆಂಡ್ ಗಳ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಬೋಲ್ಟ್ ನೂತನ ದಾಖಲೆಯನ್ನು ಬರೆದರು. ಕಾರ್ಲ್ ಲೂಯಿಸ್ ಈ ಮುಂಚೆ 1984 ರಲ್ಲಿ 100 ಮೀ ಹಾಗೂ 200 ಮೀ ಎರಡರಲ್ಲೂ ಚಿನ್ನದ ಪದಕ ಗೆದ್ದ ಸಾಧನೆಮಾಡಿದ್ದರು

100 ಮೀ ಓಟದಲ್ಲಿ ಕೂಡಾ ಚಿನ್ನದ ಪದಕ ಗೆದ್ದು ಎರಡು ಚಿನ್ನದ ಪದಕ ಗೆದ್ದ ಕೀರ್ತಿಗೆ ಬೋಲ್ಟ್ ಪಾತ್ರರಾದರು. ಆಗಸ್ಟ್ 16 ರಂದು 100 ಮೀ ದೂರವನ್ನು ಕೇವಲ 9.69 ಸೆಕೆಂಡುಗಳಲ್ಲಿ ಕ್ರಮಿಸಿದ್ದರು.ಇದಲ್ಲದೆ 400 ಮೀ ದೂರವನ್ನು 45.28 ಸೆಕೆಂಡುಗಳಲ್ಲಿ ಕ್ರಮಿಸಿದ ದಾಖಲೆ ಹೊಂದಿದ್ದಾರೆ

ಅತೀ ಕಡಿಮೆ ಅವಧಿಯಲ್ಲಿ 200 ಮೀಟರ್ ನ ಗುರಿ ಮುಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಬೋಲ್ಟ್ ನನ್ನ ಸಾಧನೆಯನ್ನು ನನಗೆ ನಂಬದಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಗುರಿ ಮುಟ್ಟಿ ಪದಕದ ಜತೆಗೆ ದಾಖಲೆಯನ್ನು ಮುರಿದಿರುವುದು ನನಗೆ ಅಶ್ಚರ್ಯ ತಂದಿದೆ ಎಂದು ಹೇಳಿದರು. ವಿಶ್ವ ದಾಖಲೆಯನ್ನು ಬರೆಯಬೇಕು ಎನ್ನುವ ಅನೇಕ ದಿನಗಳ ಹಂಬಲ ಇಂದು ಈಡೇರಿದೆ. ಸತತ ಪರಿಶ್ರಮದ ಸಾಧನೆ ಫಲ ದೊರೆತಿದೆ ಎಂದರು.

ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಒಲಿಂಪಿಕ್ಸ್ ಮೈದಾನದಲ್ಲಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಇಂದು ಅವರಿಗೆ ಅತ್ಯಂತ ಶ್ರೇಷ್ಠ ದಿನ. 108 ವರ್ಷಗಳ ಕ್ರೀಡಾ ಇತಿಹಾಸವಿರುವ ಒಲಿಂಪಿಕ್ಸ್ ಕೂಟದಲ್ಲಿ ದಾಖಲಾಗಿದ್ದ ಎಲ್ಲ ದಾಖಲೆಯನ್ನು ಕೆಲವೇ ಸೆಕಂಡ್ ಗಳಲ್ಲಿ ಮುರಿದ್ದಾರೆ. ಜಮೈಕಾ ದೇಶ ಅಷ್ಟೆ ಅಲ್ಲ, ಇಡೀ ಜಗತ್ತು ಹೆಮ್ಮೆಪಡುವಂಥ ಪ್ರದರ್ಶನವನ್ನು ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಅಧ್ಯಕ್ಷ ಜಾಕ್ವೇಸ್ ರೊಘ್ ಪ್ರಶಂಸಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X