ಸೋತು ಗೆದ್ದ ಅದೃಷ್ಟವಂತ ಕುಸ್ತಿಪಟು ಸುಶೀಲ್

A village boy turns hero sushilಬೀಜಿಂಗ್, ಆ.21:ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರೂ, ಕಂಚಿನ ಪದಕ ಗೆದ್ದಿದ್ದು, ಅದೃಷ್ಟವೋ, ಪರಿಶ್ರಮವೋ ಒಟ್ಟಿನಲ್ಲಿ ಇತಿಹಾಸ ರಚನೆಯಾಯಿತು. ಬುಧವಾರ ಬೆಳಗ್ಗೆ 66 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಶೀಲ್ ಕುಮಾರ್ ಮೊದಲ ಸುತ್ತಿನಲ್ಲಿ ಉಕ್ರೇನಿನ ಸ್ಟ್ಯಾಡ್ನಿಕ್ ವಿರುದ್ಧ ಸೋತಿದ್ದರು. ಆದರೆ ಕುಸ್ತಿಯಲ್ಲಿ ಕಂಚಿನ ಪದಕ ನಿರ್ಣಯವಾಗುವ ನಿಯಮವೇ ಬೇರೆ ರೀತಿ. ಬಾಕ್ಸಿಂಗ್ ನಲ್ಲಿದ್ದಂತೆ ಸೆಮಿಫೈನಲ್ ಪ್ರವೇಶಿಸಿ, ಸೋತರೆ ಪದಕ ಗ್ಯಾರಂಟಿ ಎನ್ನುವಂತಿಲ್ಲ. ಕುಸ್ತಿಯಲ್ಲಿ ಎರಡು ಕಂಚಿನ ಪದಕ ಪಣಕ್ಕಿರುತ್ತದೆ.

ಕಂಚು ಪದಕಗಳಿಸಬೇಕಾದರೆ ಫೈನಲ್ ತಲುಪಿದ ಇಬ್ಬ್ಬರ ವಿರುದ್ಧ ಹಿಂದಿನ 4 ಸುತ್ತಿನಲ್ಲಿ ಸೋತ ಎಂಟು ಕುಸ್ತಿ ಪಟೂಗಳು ಎರಡು ಗುಂಪುಗಳಲ್ಲಿ ಪರಸ್ಪರ ಸೆಣಸಬೇಕು. ಅಂದರೆ, ಚಿನ್ನ ಗೆದ್ದ ವ್ಯಕ್ತಿ 1 ನೇ ಸುತ್ತು, ಪ್ರಿಕ್ವಾರ್ಟರ್, ಕ್ವಾರ್ಟರ್ ಹಾಗೂ ಸೆಮಿಫೈನಲ್ ನಲ್ಲ್ ಸೋಲಿಸಿದ ಕುಸ್ತಿ ಪಟುಗಳು ಹಾಗೂ ಬೆಳ್ಳಿ ಗೆದ್ದ ವ್ಯಕ್ತಿ ಇದೇ ರೀತಿಯ ನಾಲ್ಕು ಸುತ್ತುಗಳಲ್ಲಿ ಸೋಲಿಸಿದ ನಾಲ್ವರು ಕುಸ್ತಿಪಟುಗಳು ಪರಸ್ಪರ ಸೆಣಸಬೇಕು.

ಸುಶೀಲ್ ಕುಮಾರ್ ಮಾಡಿದ್ದು ಹಾಗೆ. ಮೊದಲ ಸುತ್ತಿನಲ್ಲಿ ಸ್ಟ್ಯಾಡ್ನಿಕ್ ವಿರುದ್ಧ ಸೋತ ನಂತರ ರಿಪಚೇಚ್(ಜೀವರಕ್ಷಕ) ಎಂದು ಕರೆಯಲಾಗುವ ಅವಕಾಶದ ಮೂಲಕ ಸ್ಟ್ಯಾಡ್ನಿಕ್ ವಿರುದ್ಧ ಸೋತ ಇತರ ಮೂವರ ವಿರುದ್ಧ ಕಾದಾಡಿದರು.ಒಂದೇ ತಾಸಿನಲ್ಲಿ ಮೂರು ಪಂದ್ಯಗಳನ್ನಾಡಿ ಗೆದ್ದರು. ಅಮೆರಿಕದ ಡೌಗ್ ಶವಾಬ್, ನಂತರ ಬೆಲರೂಸ್ ನ ಅಲ್ಬರ್ಟ್ ಬ್ಯಾಟಿರೋವ್, ಕೊನೆಗೆ ಕಜಕಿಸ್ತಾನದ ಲಿಯೋನಿಡ್ ಸ್ಪಿರಿಡೊನೋವ್ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಚಾಲಕನ ಪುತ್ರನ ಸಾಧನೆ:
ದೆಹಲಿಯ ಎಂಟಿಎನ್ ಎಲ್ ನ ಬಡ ಚಾಲಕ ದಿವಾನ್ ಸಿಂಗ್ ಅವರ ಮಗನಾದ ಸುಶೀಲ್ ಕುಮಾರ್ ಈಗ ನಜಫ್ಗರ್ ನ ಬೋಪ್ರಲಾ ಗ್ರಾಮದ ದೊಡ್ಡ ಸ್ಟಾರ್. ಼ಸದ್ಯ ರೈಲ್ವೇಯಲ್ಲಿ ಕೆಲಸ ಮಾಡುತ್ತಿರುವ ಸುಶೀಲ್ ಕುಮಾರ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ರೈಲ್ವೆ ನೌಕರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಮೊದಲ ಸುತ್ತ್ತಿನಲ್ಲೇ ಸೋತ ಸುದ್ದಿ ನೋಡಿ ತುಂಬಾ ಬೇಸರ ವಾಗಿತ್ತು, ಆದರೆ ದೇವರು ದೊಡ್ಡವನು, ಸುಶೀಲ್ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಸುಶೀಲ್ ತಂದೆ ದಿವಾನ್ ಸಿಂಗ್ ಹೇಳಿದ್ದಾರೆ.ಆರ್ಥಿಕ ಇತಿಮಿತಿಯ ನಡುವೆ ತಂದೆಯಿಂದ ಕುಸ್ತಿಯ ಪ್ರಥಮ ಪಾಠಗಳನ್ನು ಶ್ರದ್ಧೆಯಿಂದ ಕಲಿತು, ಇಡೀ ದೇಶವೇ ಹೆಮ್ಮೆಪಡುವಂಥ ಸಾಧನೆ ಮಾಡಿರುವುದು ಕಮ್ಮಿಯಲ್ಲ.

(ಏಜೆನ್ಸೀಸ್)

ಒಲಿಂಪಿಕ್ಸ್ :ಭಾರತದ ಕುಸ್ತಿಪಟು ಸುಶೀಲ್ ಗೆ ಕಂಚು
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ : ವಿಜೇಂದರ್ ಗೆಲುವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+