ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ :ಕುಸ್ತಿಪಟು ರಾಜೀವ್ ತೊಮರ್ ಗೆ ಸೋಲು

By Staff
|
Google Oneindia Kannada News

ಬೀಜಿಂಗ್, ಆ. 21 : ಬುಧವಾರ ಭಾರತಕ್ಕೆ ಸುವರ್ಣ ದಿನ. ದೇಶದ ತುಂಬೆಲ್ಲಾ ಹಬ್ಬದ ವಾತಾವರಣ. ಭಾರತದ ಕುಸ್ತಿ ಪಟು ಸುಶೀಲ್ ಕಮಾರ್ ಕಂಚು ಪದಕ ಹಾಗೂ ಬಾಂಕ್ಸಿಂಗ್ ನಲ್ಲಿ ವಿಜೇಂದರ್ ಕುಮಾರ್ ಬೆಳ್ಳಿ ಪದಕ ಗೆದ್ದು ಒಲಿಂಪಿಕ್ಸ್ ಮೈದಾನದಲ್ಲಿ ಭಾರತದ ತ್ರಿವರ್ಣ ಭಾವುಟ ಹಾರಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಕ್ರೀಡಾಪ್ರೇಮಿಗಳಿಗೆ ನಿರಾಶೆ ಮೂಡಿಸುವ ಸುದ್ದಿಯೊಂದು ಗುರುವಾರ ಹೊರಬಿದ್ದಿದೆ. 120 ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ನಲ್ಲಿ ಭಾರತೀಯ ಆಟಗಾರ ರಾಜೀವ್ ತೊಮರ್ ಸೋಲುವ ಮೂಲಕ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.

ಇಂದು ನಡೆದ 120 ಕೆಜಿ ಫ್ರೈ ಸ್ಟೈಲ್ ಬಾಕ್ಸಿಂಗ್ ಪಂದ್ಯದಲ್ಲಿ ಅಮೆರಿಕದ ಸ್ಟೀವ್ ಮೊಕಾ ವಿರುದ್ಧ ಭಾರತದ ಬಾಕ್ಸಿಂಗ್ ರಾಜೀವ್ ತೊಮರ್ 4-0 ಮೂಲಕ ಗಳಿಸಿ ಪ್ರಥಮ ಸುತ್ತಿನಲ್ಲಿ ಹೀನಾಯ ಸೋಲು ಅನುಭವಿಸಿ ಕ್ರೀಡಾಕೂಟದಿಂದ ಹೊರನಡೆದರು. ಯಾವುದೇ ಪ್ರತಿರೋಧ ತೊರದಿದ್ದರಿಂದ ಅಮೆರಿಕನ್ ಬಾಕ್ಸಿಂಗ್ ಪಟು ನಿರಾಯಾಸವಾಗಿ ಪಂದ್ಯವನ್ನು ತನ್ನದಾಗಿಸಿಕೊಂಡರು. ಭಾರತ ಸುಶೀಲ್ ಕುಮಾರ್, ವಿಜೇಂದರ್ ಕುಮಾರ್ ಹಾಗೂ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಸ್ಫೂರ್ತಿ ಪಡೆಯುವಲ್ಲಿ ರಾಜೀವ ತೊಮರ್ ವಿಫಲರಾದರು. ಕಳಪೆ ಪ್ರದರ್ಶನ ನೀಡುವ ಮೂಲಕ ಭಾರತದ ಇನ್ನೊಂದು ಪದಕದ ಆಸೆಯನ್ನು ಭಗ್ನಗೊಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ಸೋತು ಗೆದ್ದ ಅದೃಷ್ಟವಂತ ಕುಸ್ತಿಪಟು ಸುಶೀಲ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X