ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು

By Staff
|
Google Oneindia Kannada News

ಇಸ್ಲಾಮಾಬಾದ್, ಆ. 20 : ಪರ್ವೇಜ್ ಮುಷರಷ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದೇಶಾದ್ಯಂತ ಸಂಭ್ರಮ ವಾತಾವರಣ ಉಂಟಾಗಿರುವ ಬೆನ್ನಲ್ಲೇ ಪಾಕಿಸ್ತಾನ ಆಡಳಿತದಲ್ಲಿರುವ ಫೆಡರಲ್ ಸರ್ಕಾರದ ಸಮ್ಮಿಶ್ರ ಪಕ್ಷಗಳಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ಯಲ್ಲಿ ಬಿರುಕು ಉಂಟಾಗಿರುವುದು ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್ ಮುಖಂಡ ನವಾಜ್ ಷರೀಫ್ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯೊಂದಿಗಿನ ಮೈತ್ರಿ ಬಹಳ ದಿನಗಳ ಕಾಲ ಉಳಿಯುವುಲ್ಲ. ದೇಶದ ಹಿತಾಸಕ್ತಿಗೆ ದಕ್ಕೆಯುಂಟು ಮಾಡಿದ್ದ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಅವರನ್ನು ಕೆಳಗಿಳಿಸಬೇಕಿತ್ತು. ಆ ಕಾರಣದಿಂದ ಪಿಪಿಪಿ ಜತೆಗೆ ಕೂಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಲಾಗಿತ್ತು. ಅದರ ಜತೆಗೆ ಮುಷರಫ್ ಆಡಳಿತಾವಧಿಯಲ್ಲಿ ಅಮಾನತುಗೊಳಿಸಲಾಗಿದ್ದ ಸುಪ್ರಿಂಕೋರ್ಟ್ ನ್ಯಾಯಾಧೀಶ ಇಫ್ತೀಕರ್ ಚೌಧರಿ ಅವರನ್ನು ಮುಷರಫ್ ರಾಜೀನಾಮೆ ನೀಡಿ ಕೇವಲ 72 ಗಂಟೆಯಲ್ಲಿ ಮತ್ತೆ ಅವರನ್ನು ಸುಪ್ರಿಂಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಯೂಸೆಫ್ ರಜಾ ಗಿಲಾನಿ ಭರವಸೆ ನೀಡಿದ್ದರು.

ಆದರೆ ಸಮಯ ಕಳೆದು ಹೋಗಿದೆ. ಇನ್ನೂ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನವಾಜ್ ಷರೀಫ್ ಸಮಿಶ್ರ ಸರ್ಕಾರಕ್ಕೆ ನೀಡುವ ಬೆಂಬಲ ಕುರಿತ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಲಾಹೋರ್ ನಲ್ಲಿ ಪಿಪಿಪಿ ಮತ್ತು ಪಿಎಂಎಲ್ ಪಕ್ಷಗಳ ಜಂಟಿ ಸಭೆಯಲ್ಲಿ ಅಮಾನತುಗೊಂಡಿರುವ ಸುಪ್ರಿಂಕೋರ್ಟ್ ನ್ಯಾಯಾಧೀಶ ಇಫ್ತೀಕರ್ ಚೌಧರಿ ಅವರನ್ನು ಮರಳಿ ನೇಮಕ ಮಾಡುವುದನ್ನು ಪ್ರದಾನಮಂತ್ರಿ ಯೂಸೆಫ್ ಗಿಲಾನಿ ನಿರಾಕರಿಸಿದ್ದರಿಂದ ಕೋಪದಿಂದ ನವಾಜ್ ಷರೀಫ್ ಸಭೆಯಿಂದ ಹೊರ ನಡೆದರು ಎಂದು ಮೂಲಗಳು ತಿಳಿಸಿವೆ. ಇಫ್ತೀಕರ್ ಚೌಧರಿ ಅವರನ್ನು ಮುಷರಫ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ನ್ಯಾಯಾಧೀಶ ಸ್ಥಾನದಿಂದ ಅಮಾನತುಗೊಳಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)
ಪೇಷಾವರದಲ್ಲಿ ಬಾಂಬ್ ಸ್ಫೋಟ : 20 ಸಾವು
ಮುಷರಫ್ ರನ್ನು ಜೀವ ಸಹಿತ ಬಿಡೆವು :ಅಲ್ ಖೈದಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X