ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷ್ಕರ, ಬಂದ್‌ಗಳಿಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

By Staff
|
Google Oneindia Kannada News

ಬೆಂಗಳೂರು,ಆ.20: ನಗರದಲ್ಲಿ ಬುಧವಾರ ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾದ ಆಟೋ ಮುಷ್ಕರ ಸಂಜೆವರೆಗೂ ಮುಂದುವರೆದು ಪ್ರಯಾಣಿಕರು ಪರದಾಡುವಂತಾಯಿತು. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಆರ್‌ಡಿಯು, ಸಿಐಟಿಯು ಸಂಘಟನೆಗಳು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದವು.

ನಗರದಲ್ಲಿ ಅಲ್ಲಲ್ಲಿ ತ್ರಿಚಕ್ರ ವಾಹನಗಳ ಸಂಚಾರ ವಿರಳವಾಗಿ ಕಂಡುಬಂದಿತು. ಹೊಸ ಆಟೋಗಳಿಗೆ ನೀಡುತ್ತಿರುವ ರಹದಾರಿ ಪತ್ರಗಳ ವಿರೋಧ,ಆಟೋ ಚಾಲಕರಿಗೆ ಇಎಸ್‍ಐ,ಪಿಎಫ್ ಸೌಲಭ್ಯ,ಕಲ್ಯಾಣ ಮಂಡಳಿ ಜಾರಿ, ಪಡಿತರ ಚೀಟಿ, ವಸತಿ ಸೌಲಭ್ಯ ಕಲ್ಪಿಸುವ ಬೇಡಿಕೆಗಳನ್ನು ಮುಂದಿರಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.

ಮುಷ್ಕರದ ಕಾರಣ ಇಂದು ಸುಮಾರು 50 ಸಾವಿರ ಆಟೋಗಳು ರಸ್ತೆಗಿಳಿಯಲಿಲ್ಲ.ಆದ ಕಾರಣಆಟೋಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಕಚೇರಿಗೆ ತೆರಳುವವರು ತೀವ್ರ ತೊಂದರೆ ಅನುಭವಿಸಿದರು. ಆಟೋ ಮುಷ್ಕರದ ಕಾರಣ ಹೆಚ್ಚುವರಿ ಬಸ್‌ಗಳ ಸೌಲಭ್ಯವನ್ನು ಬಿಎಂಟಿಸಿ ಕಲ್ಪಿಸಿತ್ತು. ಹಾಗಾಗಿ ಮುಷ್ಕ್ಕರದ ಬಿಸಿ ನಾಗರಿಕರನ್ನು ಅಷ್ಟಾಗಿ ತಟ್ಟಲಿಲ್ಲ.

ಬ್ಯಾಂಕಿಂಗ್ ವಹಿವಾಟು ಅಸ್ತವ್ಯಸ್ತ
ಅಗತ್ಯ ವಸ್ತುಗಳ ಬೆಲೆ ಏರಿಕೆ,ಹಣದುಬ್ಬರ ಸೇರಿದಂತೆ ಕೇಂದ್ರದ ಜನವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬ್ಯಾಂಕ್ ಆಫ್ ಬರೋಡ,ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಇಂಡಸ್ಟ್ರಿಯಲ್ ಡೆವಲಪ್ ಬ್ಯಾಂಕ್ ಹೊರತುಪಡಿಸಿ ದೇಶದ 27 ರಾಷ್ಟೀಯ ಬ್ಯಾಂಕ್‌ಗಳು ಇಂದು ಕರೆಕೊಟ್ಟ ಬಂದ್‌ಗೆ ಬೆಂಬಲ ಸೂಚಿಸಿದ್ದವು. ಚೆಕ್ ವಹಿವಾಟನ್ನು ಸ್ಥಗಿತಗೊಳಿಸಿದ ಕಾರಣ ವರ್ತಕರು,ಕಂಪನಿಗಳು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಉಳಿದಂತೆ ರಾಜ್ಯದಲ್ಲಿ ಭಾರತ್ ಬಂದ್‌ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಬಸ್,ರೈಲು ಸಂಚಾರ,ಅಂಗಡಿ ಮುಂಗಟ್ಟು ಮಾರುಕಟ್ಟೆ ವಹಿವಾಟುಗಳು,ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಒಟ್ಟಾರೆಯಾಗಿ ಭಾರತ್ ಬಂದ್ ರಾಜ್ಯದಲ್ಲಿ ವಿಫಲವಾಯಿತು. ಎಡಪಕ್ಷಗಳ ಪ್ರಾಬಲ್ಯವಿರುವ ಕಡೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.

(ದಟ್ಸ್‌ಕನ್ನಡ ವಾರ್ತೆ)

ತೈಲ ಬೆಲೆ ಹೆಚ್ಚಳವಿಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ
ಎಡಪಕ್ಷಗಳ ಮುಷ್ಕರಕ್ಕೆ ವ್ಯಾಪಕ ಬೆಂಬಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X