ಬನ್ನೇರುಘಟ್ಟ ರಸ್ತೆ ಸಿ.ಕೆ ಪಾಳ್ಯದಲ್ಲಿ ಸ್ಫೋಟ; ನಾಯಿ ಸಾವು

ಬೆಂಗಳೂರು, ಆ. 20 : ಕಳೆದ ತಿಂಗಳ ಸರಣಿ ಬಾಂಬ್ ಸ್ಫೋಟ ಘಟನೆ ಮಾಸುವ ಮುನ್ನವೇ ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ಕೆ.ಸಿ.ಪಾಳ್ಯದಲ್ಲಿ ಸಿಡಿಮದ್ದು ಸ್ಫೋಟಗೊಂಡಿದ್ದು, ಪಕ್ಕದಲ್ಲಿದ್ದ ನಾಯಿಯೊಂದು ಮೃತಪಟ್ಟಿದೆ. ಉಳಿದಂತೆ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

ಸ್ಫೋಟ ನಡೆದ ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸಿಡಿ ಮದ್ದು ಸ್ಫೋಟಗೊಂಡಿದ್ದು, ಅಷ್ಟೊಂದು ಅಪಾಯಕಾರಿಯಲ್ಲ ಅಲ್ಲ ಎನ್ನುವ ಅಭಿಪ್ರಾಯ ಹೊರಬಿದ್ದಿದೆ. ಆದರೆ ಸ್ಫೋಟಕ್ಕೆ ತುಂಬಾ ಹತ್ತಿರದಲ್ಲಿದ್ದ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

ಕಳೆದ ತಿಂಗಳ ಬೆಂಗಳೂರಿನ ವಿವಿಧ ಏಳು ಕಡೆಗೆ ಕಡಿಮೆ ಸಾಮರ್ಥ್ಯದ ಬಾಂಬ್ ಸ್ಫೋಟಗೊಂಡಿತ್ತು. ಒಬ್ಬ ಮಹಿಳೆ ಮೃತಪಟ್ಟು, ಆರು ಗಾಯಗೊಂಡಿದ್ದರು. ಇಂಡಿಯನ್ ಮುಜಾಹೀದಿನ್ ಸಂಘಟನೆ ಸ್ಫೋಟ ಎಸಗಿರುವುದಾಗಿ ಹೇಳಿಕೊಂಡಿತ್ತು. ಸ್ಫೋಟ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ. ಆ ನಂತರ ಆಹಮದಾಬಾದ್ ನಲ್ಲಿಯೂ ಸರಣಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಇಬ್ಬರು ಶಂಕಿತ ಉಗ್ರರು ಅಹಮದಾಬಾದ್ ಸ್ಫೋಟದಲ್ಲಿ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿ ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ತಗೆದುಕೊಂಡು ವಿಚಾರಣೆ ನಡೆಸತೊಡಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಜೈಪುರ ಸ್ಫೋಟಕ್ಕೆ ನಗರದ ವೈದ್ಯ ವಿದ್ಯಾರ್ಥಿ ನೆರವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+