ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

By Staff
|
Google Oneindia Kannada News

ನವದೆಹಲಿ,ಆ.14: ಆರನೇ ವೇತನ ಆಯೋಗದ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಗುರುವಾರ(ಆ.14) ಅಂಗೀಕರಿಸಿದ್ದು ಕೇಂದ್ರ ಸರ್ಕಾರಿ ನೌಕರರು ಹಾಗೂ ರಕ್ಷಣಾ ಇಲಾಖೆಯ ಸಿಬ್ಬಂದಿಗೆ 61ನೇ ಸ್ವಾತಂತ್ರ್ಯೋತ್ಸವದ ಬಂಪರ್ ಕೊಡುಗೆ ಯನ್ನೇ ನೀಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಇದನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಆರನೇ ವೇತನ ಆಯೋಗದ ನೇತೃತ್ವವನ್ನು ಜಸ್ಟೀಸ್ ಬಿ.ಎನ್.ಶ್ರೀಕೃಷ್ಣ ಅವರು ವಹಿಸಿದ್ದರು. ಮಾರ್ಚ್24ರಂದು ಸಲ್ಲಿಸಲಾದ ಆರನೇ ವೇತನ ಆಯೋಗದ ವರದಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಹಾಗೂ ರಕ್ಷಣಾ ಸಿಬ್ಬಂದಿಗೆ ಶೇ.28ರಷ್ಟು ವೇತನ ಏರಿಕೆಗೆ ಶಿಫಾರಸು ಮಾಡಲಾಗಿತ್ತು.

ಈ ಕುರಿತು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ,ರಕ್ಷಣಾ ಸಚಿವ ಎ.ಕೆ.ಆಂಟೋನಿ ಹಾಗೂ ವಿತ್ತ ಸಚಿವ ಪಿ.ಚಿದಂಬರಂ ಅವರೊಂದಿಗೆ ಬುಧವಾರ ಚರ್ಚಿಸಿದ ಪ್ರಧಾನಿ ಮನಮೋಹನ್ ಸಿಂಗ್ ಆರನೇ ವೇತನ ಆಯೋಗದ ಶಿಫಾರನ್ನು ಅಂಗೀಕರಿಸಿದ್ದರು.

ಆರನೇ ವೇತನ ಆಯೋಗದ ಮುಖ್ಯಾಂಶಗಳು:
*ಪರಿಷ್ಕೃತ ವೇತನ ಜನವರಿ 1,2006ರಿಂದ ಜಾರಿಯಾಗಲಿದೆ
*ಹೆಚ್ಚುವರಿ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಶೇ.40 ಹಾಗೂ ಮುಂದಿನ ಆರ್ಥಿಕ ವರ್ಷದಲ್ಲಿ ಶೇ.60ರಷ್ಟನ್ನು ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪಿ.ಆರ್.ದಾಸ್‌ಮುನ್ಷಿ ತಿಳಿಸಿದ್ದಾರೆ.
* ಕೇಂದ್ರ ನೌಕರರ ಕನಿಷ್ಠ ವೇತನ 6,660ರು.ಗಳಷ್ಟಿದ್ದದ್ದು ರು. 7000 ರು.ಗಳಿಗೆ ಏರಿಕೆಯಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X