ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

176 ಮತಗಟ್ಟೆಗಳಲ್ಲಿ ಸಾಹಿತ್ಯ ಪರಿಷತ್ ಚುನಾವಣೆ

By Staff
|
Google Oneindia Kannada News

ದಾವಣಗೆರೆ, ಆ.5: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಆ.24ರಂದು ನಡೆಯಲಿದ್ದು ಇದಕ್ಕಾಗಿ 176 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪರಿಷತ್ತಿನ ಕೇಂದ್ರ ಚುನಾವಣೆ ಅಧಿಕಾರಿ ಕೆ.ನಾಗರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪರಿಷತ್‌ನಲ್ಲಿ ಒಟ್ಟು 61,958 ಮತದಾರರಿದ್ದು ರಾಜ್ಯದಲ್ಲಿ 61,780 ಮತದಾರರಿದ್ದರೆ, ಗಡಿ ರಾಜ್ಯಗಳಲ್ಲಿ 80, ನೆರೆ ರಾಜ್ಯ ,ವಿದೇಶಗಳಲ್ಲಿ 80 ಮಂದಿ ಹಾಗೂ ಗಡಿನಾಡಿನಲ್ಲಿ 1,099 ಮಂದಿ ಮತದಾರರಿದ್ದಾರೆ. ಪ್ರತಿ ತಾಲೂಕು ಕಚೇರಿಯಲ್ಲೂ ಒಂದೊಂದು ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಮತಗಟ್ಟೆಗಳ ಮೇಲುಸ್ತುವಾರಿಯನ್ನು ಆಯಾ ತಾಲೂಕು ತಹಸೀಲ್ದಾರ್ ವಹಿಸಿಕೊಳ್ಳಲಿದ್ದಾರೆ. ಮತದಾನ ಆ.24ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ ಎಂದು ಅವರು ತಿಳಿಸಿದರು. ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಸ್ಥಾನ ಸೇರಿದಂತೆ 29 ಜಿಲ್ಲಾ ಘಟಕ ಹಾಗೂ ನಾಲ್ಕು ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಹಿಂದಿನ ಪರಿಷತ್ ಚುನಾವಣೆಗಾಗಿ ರು.15 ಲಕ್ಷ ಖರ್ಚಾಗಿತ್ತು, ಆದರೆ ಈ ಬಾರಿಯ ಚುನಾವಣೆ ವೆಚ್ಚವನ್ನು ರು.6 ಲಕ್ಷಗಳಿಗೆ ನಿಗದಿಗೊಳಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಎಲ್ಲ ಮತದಾರರಿಗೂ ಲ್ಯಾಮಿನೇಷನ್ ಮಾಡಿದ ಗುರುತಿನ ಚೀಟಿಗಳನ್ನು ವಿತರಿಸಲಾಗಿತ್ತು, ಹಾಗಾಗಿ ಚುನಾವಣೆ ವೆಚ್ಚ ಅಧಿಕವಾಗಿತ್ತು ಎಂದು ನಾಗರಾಜು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಎಲ್ಲ ಮತಗಟ್ಟೆಗಳ ಬಳಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತದೆ. ಪರಿಷತ್‍ನ ಮೂಲ ಉದ್ದೇಶವಾದ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಜಾನಪದ ಇವುಗಳ ರಕ್ಷಣೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ನೀತಿ ಸಂಹಿತೆ ಇರುವುದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಕೆ.ಅಮರ ನಾರಾಯಣ, ತಹಸೀಲ್ದಾರ್ ನಾಗಹನುಮಯ್ಯ ಉಪಸ್ಥಿತರಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X