ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನಕ್ಕೆ ಅಡ್ವಾಣಿ ಆಗ್ರಹ

By Staff
|
Google Oneindia Kannada News

ನವದೆಹಲಿ, ಆ. 5 : ದೇಶದಲ್ಲಿ ತಾಂಡವವಾಡುತ್ತಿರುವ ಭಯೋತ್ಪಾದನೆ, ಹಣದುಬ್ಬರದಿಂದ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ, ಅಮರನಾಥ ಭೂವಿವಾದದಿಂದ ಉಂಟಾಗಿರುವ ಗೊಂದಲ ಸೇರಿದಂತೆ ಅನೇಕ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರದಲ್ಲಿ ಮುಂಗಾರು ಅಧಿವೇಶನ ಕರೆಯಬೇಕು ಎಂದು ಪ್ರತಿಪಕ್ಷದ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಛತ್ತೀಸ್ ಗಢ ಸದನ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮುಂಗಾರು ಅಧಿವೇಶನಕ್ಕೆ ತನ್ನದೇ ಆದ ಘನತೆ ಇದೆ. ಕೇಂದ್ರದಲ್ಲಿರುವ ಪ್ರತಿ ಪಕ್ಷಗಳು ಮುಂಗಾರು ಅಧಿವೇಶನವನ್ನು ನಡೆಸುತ್ತಿದ್ದವು. ಆದರೆ ಯುಪಿಎ ಆ ಕುರಿತು ತುಟಿಪಿಟ್ಟೆಂದಿಲ್ಲ ಎಂದರು. ಮುಂಗಾರು ಅಧಿವೇಶನ ಕರೆಯಲೆಬೇಕು ಎಂದು ಆಗ್ರಹಿಸಿದ ಅವರು. ಪ್ರಧಾನಮಂತ್ರಿ ಈ ವಿಷಯದಲ್ಲಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಮುಖ್ಯವಾಗಿ ದೇಶದಲ್ಲಿ ಭಯೋತ್ಪಾದನೆ ಅವ್ಯಾಹತವಾಗಿ ನಡೆದಿದೆ. ಬೆಂಗಳೂರು ಮತ್ತು ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಗಳು ಕಣ್ಣೆದುರಿಗಿದೆ. ಈ ದುರ್ಘಟನೆಯಲ್ಲಿ ಅನೇಕ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದರು.

ಇದು ಕೇಂದ್ರದ ಗುಪ್ತಚರ ಇಲಾಖೆ ಸಂಪೂರ್ಣ ವೈಫಲ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ದೇಶದಲ್ಲಿ ಅನಾಹುತಗಳು ಸಂಭವಿಸಿದರೂ ಯುಪಿಎ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು. ಹಾಗೆಯೇ ಹಣದುಬ್ಬರವನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ. ಅದರಿಂದ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿವೆ. ಸಾಮಾನ್ಯ ಜನರ ಜೀವನ ತುಂಬಾ ಕಷ್ಟವಾಗಿದೆ. ಇಷ್ಟಾದರೂ ಕೂಡಾ ಇದಕ್ಕೊಂದು ಸ್ಪಷ್ಟವಾದ ಪರಿಹಾರ ಕಂಡು ಹಿಡಿಯುವಲ್ಲಿ ಸೋತಿದೆ ಎಂದು ಕಟುಕಿದರು.

ಹಿಂದುಗಳ ಪವಿತ್ರ ಸ್ಥಳ ಅಮರನಾಥ ದೇವಾಲಯಕ್ಕೆ ನೀಡಿದ್ದ ಭೂವಿವಾದ ಇಂದು ತಾರಕ್ಕೇರಿದೆ. ಜಮ್ಮು ಹಾಗೂ ಇತರ ಜಿಲ್ಲೆಗಳು ಅಕ್ಷರಶಃ ಹಿಂಸೆ ಪ್ರದೇಶಗಳಾಗಿ ಪರಿವರ್ತಿತವಾಗಿವೆ. ಇಲ್ಲಿ ನಡೆಯುತ್ತಿರುವ ಪ್ರತಿಭಟನೆ ಅನೇಕ ಜನರ ಪ್ರಾಣವನ್ನು ತಗೆದುಕೊಂಡಿದೆ. ತಿಂಗಳ ಹಿಂದೆ ಉದ್ಭವಿಸಿರುವ ಈ ಸಮಸ್ಯೆಗೆ ಇಲ್ಲಿಯವರೆಗೂ ಕೇಂದ್ರದ ಯುಪಿಎ ಸ್ಪಂದಿಸದಿರುವುದು ಅಕ್ಷಮ್ಯ ಎಂದು ಗುಡುಗಿದರು. ಆದ್ದರಿಂದ ಕೂಡಲೇ ಮುಂಗಾರು ಅದಿವೇಶನ ಕರೆಯಬೇಕು ಎಂದು ಅಡ್ವಾಣಿ ಆಗ್ರಹಿಸಿದರು.

(ದಟ್ಸ್ ಕನ್ನಡ ವಾರ್ತೆ)

ಅಮರನಾಥ್ ಭೂವಿವಾದ : ಸರ್ವಪಕ್ಷಗಳ ಸಭೆಗೆ ಕರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X