ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ಕ್ ಸಮ್ಮೇಳನಕ್ಕೆ ಆಗಮಿಸಿದ ಪ್ರಣಬ್ ಮುಖರ್ಜಿ

By Staff
|
Google Oneindia Kannada News

ಕೊಲಂಬೋ,ಜು. 31 : ಹದಿನಾಲ್ಕನೇ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಖಾತೆ ಸಚಿವ ಪ್ರಣಬ್ ಮುಖರ್ಜಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಶ್ರೀಲಂಕಾ ವಿದೇಶಾಂಗ ಖಾತೆ ಹುಸೇನ್ ಬಹಿಲಾ ಮತ್ತು ಭಾರತೀಯ ರಾಯಭಾರಿ ಅಲೋಕ್ ಪ್ರಸಾದ್ ಪ್ರಣಬ್ ಮುಖರ್ಜಿ ಅವರನ್ನು ಭವ್ಯವಾಗಿ ಬರಮಾಡಿಕೊಂಡರು.

ದಕ್ಷಿಣ ಏಷ್ಯಾದ ಶೃಂಗ ಸಮ್ಮೇಳನವಾಗಿರುವ ಸಾರ್ಕ್ ಮೇಳದಲ್ಲಿ ಮುಖ್ಯವಾಗಿ ಸದ್ಯದ ಆರ್ಥಕ ಪರಿಸ್ಥಿತಿಯ ಕುರಿತು ಚರ್ಚೆ ನಡೆಯುವ ಸಾಧ್ಯೆತಗಳಿವೆ. ಅದರ ಜಗತ್ತಿಗೆ ಸವಾಲಾಗಿರುವ ಭಯೋತ್ಪಾದನೆ ಪಿಡುಗಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯಲಿವೆ. ಸಾರ್ಕ್ ದೇಶಗಳಾದ ಭಾರತ, ಪಾಕಿಸ್ತಾನ, ಅಫಘಾನಿಸ್ತಾನದಲ್ಲಿ ಉಗ್ರರ ಹಾವಳಿ ಮೀತಿಮೀರಿದ್ದು, ಈ ದೇಶಗಳಲ್ಲಿ ಇವರ ದುಷ್ಕ್ರತ್ಯವನ್ನು ಎದುರಿಸುವುದು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಇತ್ತೀಚೆಗೆ ಭಾರತದ ಬೆಂಗಳೂರು ಮತ್ತು ಅಹಮದಾಬಾದ್, ಸೂರತ್ ನಲ್ಲಿ ಉಗ್ರರು ಬಾಂಬ್ ಸ್ಫೋಟಿಸಿರುವುದು ಸಮ್ಮೇಳನದಲ್ಲಿ ಮುಖ್ಯವಾಗಿ ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಭಾರತದ ದೊಡ್ಡ ನಗರಗಳಾದ ಕೊಲ್ಕತ್ತಾ, ಮುಂಬೈ, ದೆಹಲಿ, ಚೆನ್ನೈ ನಗರಗಳಿಗೆ ಬಾಂಬ್ ಸ್ಫೋಟಗೊಳಿಸುವ ಬೆದರಿಕೆ ಕರೆಗಳು ಬರುತ್ತಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಪ್ರಣಿಬ್ ಮುಖರ್ಜಿ ಎಲ್ಲ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸಲಿದ್ದಾರೆ. ಈ ಹಿಂದೆ ಅನೇಕ ಭಾರಿ ಉಗ್ರರ ನಿಗ್ರಹಕ್ಕೆ ಸಮ್ಮೇಳನದಲ್ಲಿ ಒಪ್ಪಂದ ಮಾಡಿಕೊಂಡರೂ ಸಹ ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಉಗ್ರರು ನೆಲೆಸಿರುವುದು, ಅಲ್ಲಿನ ಸರ್ಕಾರ ಪ್ರಚೋದನೆ ನೀಡುತ್ತಿರುವ ಸಂಶಯ ಜನರಲ್ಲಿ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಸಾರ್ಕ್ ಮೇಳದಲ್ಲಿ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಣಬ್ ಮುಖರ್ಜಿ ತೆರಳಿದ್ದಾರೆ.

ಉಳಿದಂತೆ ಅ.2 ಮತ್ತು 3 ರಂದು ನಡೆಯಲಿರುವ ಮೇಳದಲ್ಲಿ ಆಹಾರ, ತೈಲ ಬೆಲೆ, ಗಡಿ ಸಮಸ್ಯೆ ಮತ್ತಿತರ ಸಮಸ್ಯೆಗಳು ಗಣನೆಗೆ ಬರಲಿವೆ. ಅ.1 ರಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶ್ರೀಲಂಕಾಕ್ಕೆ ಆಗಮಿಸುವರು. ಮೇಳದ ಹಿನ್ನೆಲೆಯಲ್ಲಿ ನಗರಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದ್ದು,ಸುಮಾರು 19 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಭಾರತ ಅಣು ರಾಷ್ಟ್ರವಾಗುವುದು ನಿಶ್ಚಿತ: ಪ್ರಣಬ್
ಅಣು ಒಪ್ಪಂದ ಅಣ್ವಸ್ತ್ರ ತಯಾರಿಕೆಗೆ ಅಲ್ಲ: ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X