ಶಂಕರಿ ಬಿದರಿ ನಗರದ ಹೊಸ ಪೊಲೀಸ್ ಆಯುಕ್ತ
ಬೆಂಗಳೂರು, ಜು. 11 : ರಾಜ್ಯ ಸರ್ಕಾರ ಗುರುವಾರ 41 ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.ಗುಪ್ತದಳದ ಮುಖ್ಯರಾಗಿದ್ದ ಶಂಕರ ಬಿದರಿ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ಮತ್ತು ಗುಪ್ತ ದಳದ ಮುಖ್ಯಸ್ಥರನ್ನಾಗಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಅಧಿಕಾರಿ ವರ್ಗಾವಣೆಯನ್ನು ದೊಡ್ಡ ಮಟ್ಟದಲ್ಲಿ ಮಾಡಿರುವುದು ಇದೇ ಮೊದಲ ಸಲವಾಗಿದೆ. ವರ್ಗಾವಣೆಗೊಂಡಿರುವ ಅಧಿಕಾರಿ ಮತ್ತು ಅವರ ಹುದ್ದೆಗಳು ಕೆಳಗಿನಂತಿವೆ.
ಶಂಕರ ಬಿದರಿ - ಬೆಂಗಳೂರು ನಗರ ಪೊಲೀಸ್ ಆಯುಕ್ತ
ಜ್ಯೋತಿ ಪ್ರಕಾಶ್ ಮಿರ್ಜಿ - ಗುಪ್ತದಳದ ಮುಖ್ಯಸ್ಥ
ಡಾ. ಎಸ್. ಪರಶಿವಮೂರ್ತಿ - ಮೈಸೂರು ಆಯುಕ್ತ
ಎನ್. ಶಿವಕುಮಾರ್ - ಹುಬ್ಬಳ್ಳಿ-ಧಾರವಾಡ ಆಯುಕ್ತ
ನೀಲಂ ಅಚ್ಯುತ್ ರಾವ್ - ಆಂತರಿಕ ಭದ್ರತೆಯ ಎಡಿಜಿಪಿ
ಎಸ್.ಸಿ ಸೆಕ್ಸೇನಾ - ಗೃಹ ನಿರ್ಮಾಣ ನಿಗಮ, ವ್ಯವಸ್ಥಾಪಕ ನಿರ್ದೇಶಕ
ಎಸ್.ಟಿ.ರಮೇಶ್ - ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆ
ಧರ್ಮಪಾಲ್ ನೇಗಿ - ಬಂಧಿಖಾನೆ ಎಡಿಜಿಪಿ
ಡಾ.ಬಿ.ಇ.ಉಮಾಪತಿ - ಎಡಿಜಿಪಿ ಆಡಳಿತ
ಬಿಪಿನ್ ಗೋಪಾಲ್ ಕೃಷ್ಣ - ಐಜಿಪಿ ರಾಜ್ಯ ಮಾನವ ಹಕ್ಕುಗಳ ಆಯೋಗ
ಕೆ.ಎಸ್.ಎನ್.ಚಿಕ್ಕೇರೂರು - ಐಜಿಪಿ ರೈಲ್ವೇ
ಖಾಜಿ ಅಬ್ದುಲ್ ಹಫೀಜ್ - ಹೆಚ್ಚುವರಿ ಪೊಲೀಸ್ ಆಯುಕ್ತ ಬೆಂಗಳೂರು
ಸಿ.ಚಂದ್ರಶೇಖರ್ - ಐಜಿಪಿ ಈಶಾನ್ಯ ವಲಯ
ಎಂ.ಎನ್.ರೆಡ್ಡಿ - ಐಜಿಪಿ ಸಿಓಡಿ ಬೆಂಗಳೂರು
ಎಂ.ಆರ್. ಪೂಜಾರ್ - ಹೆಚ್ಚವರಿ ಪೊಲೀಸ್ ಆಯುಕ್ತರು ಬೆಂಗಳೂರು
ಎಂ.ವಿ.ಮೂರ್ತಿ - ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರು
ಅಲೋಕ್ ಮೋಹನ್ - ಐಜಿಪಿ ಕೆಪಿಟಿಸಿಎಲ್ ಬೆಂಗಳೂರು
ಎನ್.ಆರ್.ನಡಮನಿ - ಐಜಿಪಿ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಪೋರ್ಸ್ ಬೆಂಗಳೂರು
ಡಾ.ಪಿ.ರವೀಂದ್ರನಾಥ್ - ಐಜಿಪಿ ಆಡಳಿತ ಬೆಂಗಳೂರು
ಸಂಜಯ್ ಸಹಾಯ್ - ಐಜಪಿ ಕೇಂದ್ರ ಕಚೇರಿ-1 ಬೆಂಗಳೂರು
ಬಿ.ದಯಾನಂದ - ಕಮಾಂಡೆಂಟ್ ನಕ್ಸಲ್ ನಿಗ್ರಹ ದಳ, ಕಾರ್ಕಳ
ಪೌಲ್ ಅಮ್ರಿತ್ - ಉಪಪೊಲೀಸ್ ಆಯುಕ್ತ ದಕ್ಷಿಣ ಬೆಂಗಳೂರು
ಪಿ.ಹರಿಹರನ್ - ಸಹಾಯಕ ಐಜಿಪಿ ಅಪರಾಧ ಬೆಂಗಳೂರು
ಕೆ.ಶ್ರೀನಿವಾಸ್ - ಉಪಪೊಲೀಸ್ ಆಯುಕ್ತ ಸಂಚಾ ಪೂರ್ವ ವಿಭಾಗ ಬೆಂಗಳೂರು
ಎಂ.ನಂಜುಂಡಸ್ವಾಮಿ - ಉಪಆಯುಕ್ತರು ಸಿಎಆರ್ ಕೇಂದ್ರ ಕಚೇರಿ ಬೆಂಗಳೂರು
ಬಿಎನ್ಎಸ್ ರೆಡ್ಡಿ - ಎಸ್ಪಿ ಕೊಡಗು ಜಿಲ್ಲೆ
ಎಂ.ಹೇಮಂತ್ ನಿಂಬಾಲ್ಕರ್ - ಎಸ್ಪಿ ಚಿಕ್ಕಮಗಳೂರು
ಎಸ್.ರವಿ - ಉಡುಪಿ ಎಸ್ಪಿ
ಮನೀಷ್ ಖಾರ್ಬೀಕರ್ - ಎಸ್ಪಿ ಮಂಡ್ಯ
ಬಿ.ಶಿವಕುಮಾರ್ - ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು
ವಿಪುಲ್ ಕುಮಾರ್ - ಎಸ್ಪಿ ಕೋಲಾರ
ದೇವಜ್ಯೋತಿರಾಯ್ - ಎಸ್ಪಿ ಗುಲ್ಬರ್ಗಾ
ಡಾ. ಜಿ.ರಮೇಶ್ - ಡಿಸಿಪಿ ಕೆಂದ್ರ ವಿಭಾಗ ಬೆಂಗಳೂರು
ಎನ್.ಶಿವಪ್ರಸಾದ್ - ಡಿಸಿಪಿ ಆಡಳಿತ ಬೆಂಗಳೂರು
ಸೋನಿಯಾ ನಾರಂಗ್ - ಎಸ್ಪಿ ಬೆಳಗಾವಿ
ಎಚ್.ಎಸ್.ವೆಂಕಟೇಶ್ - ಕೆಜಿಎಫ್ ಎಸ್ಪಿ
ಸಂದೀಪ್ ಪಾಟೀಲ್ - ಎಸ್ಪಿ ದಾವಣಗೆರೆ
ವಿಕಾಶ್ ಕುಮಾರ್ ವಿಕಾಶ್ - ಎಸ್ಪಿ ಹಾವೇರಿ
ಕೌಶಲೇಂದ್ರ ಕುಮಾರ್ - ಎ ಎಸ್ಪಿ ಅಳಂದ ಉಪವಿಭಾಗ
ಎಂ.ಬಿ.ನಂಜುಂಡಪ್ಪ - ಎಸ್ಪಿ ಉತ್ತರ ಕನ್ನಡ
ಡಾ.ಬಿ.ಎ.ಮಹೇಶ್ - ಎಸ್ಪಿ ಬೆಂಗಳೂರು ಜಿಲ್ಲೆ
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications