ವದಂತಿಗೆ ಕಿವಿಗೊಡಬೇಡಿ : ಪೊಲೀಸ್ ಕಮಿಷನರ್
ಬೆಂಗಳೂರು, ಜೂ. 11: ಶುಕ್ರವಾರ ಮಧ್ಯಾನ್ಹ ಜೆಸಿ ನಗರ ಪ್ರದೇಶದಲ್ಲಿ ಉಂಟಾದ ಗಲಭೆ ಈಗ ತಣ್ಣಗಾಗಿದೆ. ಕಿತಾಪತಿ ಮಾಡುವ ಜನ ಒಂದು ಪ್ರಾರ್ಥನಾ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ್ದರಿಂದಾಗಿ ಪ್ರದೇಶದಲ್ಲಿ ಶಾಂತಿ ಭಂಗವಾಗಿತ್ತು. ಆನಂತರ ಪೊಲೀಸರು ಮತ್ತು ಶಾಸಕರು ಹಾಗೂ ಜವಾಬ್ದಾರಿಯುತ ನಾಗರಿಕರ ಮಧ್ಯಪ್ರವೇಶದಿಂದಾಗಿ ಗಲಾಟೆ ನಿಂತಿತು.
ಹೆಬ್ಬಾಳದಲ್ಲಿ ಗಲಾಟೆ, ಅಲ್ಲಿ ಗಲಾಟೆ ಇಲ್ಲಿ ಗಲಾಟೆ ಎನ್ನುವ ವದಂತಿಗಳು ಹಬ್ಬುತ್ತಿವೆ. ಈ ಬಗ್ಗೆ ವಿಚಾರಿಸುವ ದೂರವಾಣಿ ಕರೆಗಳು ದಟ್ಸ್ ಕನ್ನಡಕ್ಕೆ ಬರುತ್ತಿವೆ. ಪೊಲೀಸ್ ಕಂಟ್ರೋಲ್ ರೂಂ ಮಾಹಿತಿಯ ಪ್ರಕಾರ ಪರಿಸ್ಥಿತಿ ಶಾಂತವಾಗಿದೆ, ಹದ್ದುಬಸ್ತಿನಲ್ಲಿದೆ. ವದಂತಿಗೆ ಕಿವಿಗೊಡಬಾರದು ನಾಗರಿಕರು ಶಾಂತಿಯಿಂದಿರಬೇಕೆಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ್ ಬಿದರಿ ಮನವಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಹೆಬ್ಬಾಳ ಜೆಸಿ ನಗರದಲ್ಲಿ ಶಾಂತಿ ಭಂಗ












Click it and Unblock the Notifications