ವಿಶ್ವಾಸಮತ ಯಾಚನೆಗೆ ಸಿದ್ಧ ಮನಮೋಹನ್ ಸಿಂಗ್

ನವದೆಹಲಿ, ಜು.10 : ಅಮೇರಿಕಾದೊಂದಿಗಿನ ಪರಮಾಣು ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿಶ್ವಾಸಮತಕ್ಕೆ ಯುಪಿಎ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ದೇಶದ ಹಿತಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದಿರುವ ಅವರು, ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದು ಅವರು ವಿಶ್ವಾಸದಿಂದ ಹೇಳಿದರು.

ಒಪ್ಪಂದದ ಕರಡು ಪ್ರತಿ

ಅಮೇರಿಕಾದೊಂದಿಗಿನ ಪರಮಾಣು ಒಪ್ಪಂದದ ಕೆಲ ಮಹತ್ವದ ಅಂಶಗಳನ್ನು ಇಂದು ಯುಪಿಎ ಸರ್ಕಾರ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಭಾರತಕ್ಕೆ ನಿರಂತರ ಇಂಧನ ಪೂರೈಕೆ ಸ್ವಾತಂತ್ರ್ಯ, ಅಂತರಾಷ್ಟ್ರೀಯ ಅಣು ಶಕ್ತಿ ಆಯೋಗ ರಚನೆ, ಮುಕ್ತ ಅಣುಬಂಧ ನೀತಿ, ನಾಗರಿಕ ಅಣು ಶಕ್ತಿ ಕಾರ್ಯಚರಣೆ ಮುಂದುವರಿಕೆ ಕರಡು ಪ್ರತಿಯ ಮುಖ್ಯ ಅಂಶಗಳಾಗಿವೆ.

ಜಿ.8 ರಾಷ್ಟ್ರಗಳ ಸಹಕಾರ

ಜಪಾನ್ ನ ಟೊಕಿಯೋ ದಲ್ಲಿ ಜು. 7 ರಿಂದ ಮೂರು ದಿನಗಳ ಕಾಲ ನಡೆದ ಜಿ.8 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಆರ್ಥಿಕ ದೇಶಗಳು ಭಾರತ ಪರಮಾಣು ಒಪ್ಪಂದಕ್ಕೆ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತದ ಜತೆಗೆ ಕೆಲಸ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ಜಿ.8 ಶಂಗಸಭೆಯ ಉಳಿದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತದಲ್ಲಿ ಹೆಚ್ಚುತ್ತಿರುವ ಅಣುಶಕ್ತಿಯ ಅವಶ್ಯಕತೆ ನೀಗಿಸಿಕೊಳ್ಳಲು ಸಹಾಯ ಮಾಡುವುದಾಗಿ ಈ ರಾಷ್ಟ್ರಗಳು ಭರವಸೆ ನೀಡಿವೆ.

ಈ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾತನಾಡಿ, ಅಣು ಒಪ್ಪಂದಕ್ಕೆ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿರುವ ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಕಾರಣದಿಂದ ದಿನಗಳಿಂದ ಒಪ್ಪಂದಕ್ಕೆ ಕೆಲ ಕಾಲ ಹಿನ್ನಡೆಯಿಂಟಾಗಿತ್ತು. ಆದರೆ ಇದೀಗ ಈ ಭಯವಿಲ್ಲದ ಕಾರಣ, ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದಾಗಿ ಹೇಳಿದರು.

ಅಮೇರಿಕಾ ಅಧ್ಯಕ್ಷ ಜಾರ್ಜ್ ಬುಷ್ ಜತೆಗೆ ಸುಮಾರು 50 ನಿಮಿಷಗಳ ಕಾಲ ಮಾತುಕತೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ಸಿಂಗ್, ಭಾರತ ಭಾರಿ ವಿಶ್ವಾಸದಿಂದ ಅಮೇರಿಕಾದೊಂದಿಗೆ ಅಣಉ ಒಪ್ಪಂದಕ್ಕೆ ಮುಂದಾಗಿದೆ. ಇದು ಮುಂದಿನ ದಿನಗಳಲ್ಲಿ ಮುಖ್ಯವಾಗಿ ಪರಮಾಣು, ವೈಜ್ಞಾನಿಕ, ಶಿಕ್ಷಣ ಮತ್ತು ಬಾಹ್ಯಾಕಾಶ ರಂಗಕ್ಕೆ ಅನುಕೂವಾಗಲಿದೆ ಎಂದು ಹೇಳಿದರು.ಜಿ. 8 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಗೆ ತೆರಳಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಗುರುವಾರ ಬೆಳಗ್ಗೆ ಸ್ವದೇಶಕ್ಕೆ ಆಗಮಿಸಿದ್ದಾರೆ.

ಅಮೇರಿಕಾ ಸೇರಿದಂತೆ ಆರ್ಥಿಕ ಕ್ಷೇತ್ರದ ಎಂಟು ದೇಶಗಳ ಶೃಂಗಸಭೆಯಲ್ಲಿ ಪರಮಾಣು ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿ ಸಹಿ ಹಾಕಿ ಭಾರತಕ್ಕೆ ಮರಳಿದ್ದಾರೆ. ಆದರೆ ಅಣು ಒಪ್ಪಂದಕ್ಕೆ ಸಹಿ ಹಾಕಿರುವ ಪ್ರಧಾನಮಂತ್ರಿ ಅವರ ಕ್ರಮವನ್ನು ಖಂಡಿಸಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿವೆ. ಪ್ರತಿಪಕ್ಷ ಬಿಜೆಪಿ ಯುಪಿಎ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಧಾನಮಂತ್ರಿಯವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+