ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಗುಳೆಹೊರಟ ಬಿಪಿಓಗಳು

By Staff
|
Google Oneindia Kannada News

ಬೆಂಗಳೂರು, ಜು. 10 : ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರು ಇನ್ನು ಕೆಲವೆ ವರ್ಷಗಳಲ್ಲಿ ತನ್ನ ಪಟ್ಟವನ್ನು ಕಳೆದುಕೊಳ್ಳಲಿದೆಯೇ ? ಹೌದು ಎನ್ನುತ್ತದೆ ಮಾನವ ಸಂಪನ್ಮೂಲ ಮತ್ತು ರಿಯಲ್ ಎಸ್ಟೇಟ್ ತಜ್ಞರ ತಂಡ. ಬಿಪಿಓಗಳಿಗೆ ಜಾಗತಿಕ ಮಾರುಕಟ್ಟೆಯಿಂದ ಬರುತ್ತಿದ್ದ ಹೊರಗುತ್ತಿಗೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಬಿಪಿಓಗಳು ಸಂಖ್ಯೆ ಕೂಡ ಇಳಿಮುಖವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಐಟಿಬಿಟಿ ಕ್ಷೇತ್ರದಲ್ಲಿ ದೇಶದಲ್ಲಿ ಬೆಂಗಳೂರು ಸಿಂಹಪಾಲು ಪಡೆದಿದೆ. ಜಾಗತಿಕ ಮಟ್ಟದ ಸಾಫ್ಟವೇರ್, ಬಿಪಿಓ ಮತ್ತು ಕಾಲ್ ಸೆಂಟರ್ ಗಳ ದೊಡ್ಡ ಸಮೂಹವೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಉದ್ಯಮಕ್ಕೆ ಕರ್ನಾಟಕ ಪ್ರಶಸ್ಥವಾದ ಸ್ಥಳ ಎನ್ನುವ ಕಾರಣಕ್ಕೆ ನಗರದಲ್ಲಿ ಸ್ಥಾಪನೆಗೊಂಡಿವೆ. ಆದರೆ 2007ರಲ್ಲಿ ಪ್ರತಿ ತಿಂಗಳು ಎರಡರಂತೆ ಸ್ಥಾಪನೆಗೊಳ್ಳುತ್ತಿದ್ದ ಬಿಪಿಓ ಮತ್ತು ಕಾಲ್ ಸೆಂಟರ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿಲ್ಲ. ಕಾರಣ ಹೊರಗುತ್ತಿಗೆ ಪ್ರಮಾಣ ಗಮನಾರ್ಹಪ್ರಮಾಣದಲ್ಲಿ ಕಡಿಮೆಯಾಗಿದೆ.

ಹೊರಗುತ್ತಿಗೆ ನೀಡಲು ಕಂಪನಿಯ ಮುಖ್ಯಸ್ಥರು ಬೆಂಗಳೂರಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. 2008ರ ಜುಲೈ ವರೆಗೆ ಇದರ ಪ್ರಮಾಣವನ್ನು ಅವಲೋಕಿಸಿದರೆ ಕುಸಿತ ಪ್ರಮಾಣ ಎದ್ದು ಕಾಣುತ್ತದೆ. ಬೆಂಗಳೂರು ಬದಲಾಗಿ ಚೆನ್ನೈ, ಹೈದರಾಬಾದ್, ನೋಯಿಡಾ, ಕೋಲ್ಕತ್ತಾ, ಕೊಚ್ಚಿ ಕಡೆಗೆ ಕಂಪನಿಗಳು ಮುಖಮಾಡಿವೆ. ಕಾರಣ ಹೊರಗುತ್ತಿದೆ ಪ್ರಮಾಣ ಶೇ. 30 ರಷ್ಟು ಕುಸಿದಿದೆ ಎಂದು ತಿಳಿದು ಬಂದಿದೆ. ಇನ್ನೊಂದು ಮೂಲಕ ಪ್ರಕಾರ ಬೆಂಗಳೂರು ಬಲು ದುಬಾರಿ ನಗರವೆಂಬ ಆರೋಪ ಮತ್ತು ಯೂರೋಪ ಮತ್ತು ಅಮೆರಿಕ ಹೊರಗುತ್ತಿಗೆ ಬರಲು ಕಡಿಮೆಯಾಗಲು ಕಾರಣ ಅಧ್ಯಕ್ಷೀಯ ಚುನಾವಣೆಯೂ ಇದರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ. ಒಟ್ಟಿನಲ್ಲಿ ಬೆಂಗಳೂರು ಐಟಿ ಸಿಟಿ ಪಟ್ಟವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಎನ್ನತ್ತದೆ ತಜ್ಞರ ತಂಡ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X